ಹುಕ್ಕೇರಿ: ಇಲ್ಲಿನ ಮಹಾವೀರ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು 2025-26ನೇ ಸಾಲಿಗೆ ₹3.55 ಕೋಟಿ ಲಾಭ ಹೊಂದಿ ಪ್ರಗತಿಯಲ್ಲಿದೆ ಎಂದು ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕು ಈಗ 17 ಶಾಖೆ ಒಳಗೊಂಡು 7 ಜಿಲ್ಲೆಗಳಲ್ಲಿ (ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಾರವಾರ, ವಿಜಯಪುರ ಮತ್ತು ಬಾಗಲಕೋಟೆ) ಕಾರ್ಯಾಚರಣೆ ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹುಬ್ಬಳ್ಳಿಯಲ್ಲಿ ಶಾಖೆ ತೆರೆಯಲು ನಿರ್ಧರಿಸಲಾಗಿದೆ’ ಎಂದರು.
ಈ ಸಾಲಿನಲ್ಲಿ ₹250.54 ಕೋಟಿ ಸಾಲ ವಿತರಿಸಿ ಶೇ 97ರಷ್ಟು ಸಾಲ ವಸೂಲಿ ಮಾಡಲಾಗಿದೆ. ಸದಸ್ಯರಿಗೆ ಶೇ 25ರಷ್ಟು ಲಾಭಾಂಶ ಹಂಚಲು ಅನುಮತಿ ಪಡೆಯಲಾಗುವುದು ಎಂದರು.
ನಿರ್ದೇಶಕರಾದ ಕಿರಣ ಸೊಲ್ಲಾಪುರೆ, ಸಂಜಯ ನಿಲಜಗಿ, ಪ್ರಜ್ವಲ್ ನಿಲಜಗಿ, ರೀಡ್ಸ್ ಅಧ್ಯಕ್ಷ ಅಶೋಕ ಪಾಟೀಲ್, ಜನರಲ್ ಮ್ಯಾನೇಜರ್ ರಾಜೇಂದ್ರ ಪಾಟೀಲ್, ಶಾಖಾ ವ್ಯವಸ್ಥಾಪಕ ಸಂತೋಷ ರಜಪೂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.