ADVERTISEMENT

ಮಳೆಗಾಲ ಸಿದ್ದೇಶ್ವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 12:05 IST
Last Updated 4 ಸೆಪ್ಟೆಂಬರ್ 2018, 12:05 IST
ಮಳೆಗಾಲ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಥಣಿಗೆ ಬಂದ ವಿವಿಧ ಗ್ರಾಮಗಳ ದೇವರ ಪಲ್ಲಕ್ಕಿಗಳನ್ನು ಸೋಮವಾರ ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು
ಮಳೆಗಾಲ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಥಣಿಗೆ ಬಂದ ವಿವಿಧ ಗ್ರಾಮಗಳ ದೇವರ ಪಲ್ಲಕ್ಕಿಗಳನ್ನು ಸೋಮವಾರ ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು   

ಅಥಣಿ: ಪಟ್ಟಣದಲ್ಲಿ ಮಳೆಗಾಲ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಸೋಮವಾರ ನೆರವೇರಿತು.

ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬಂದ ಅಮೋಘಸಿದ್ದ ದೇವರು ಹಾಗೂ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಪಟ್ಟಣದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

ಮೆರವಣಿಗೆ ಉದ್ಘಾಟಿಸಿದ ಕವಲಗುಡ್ಡದ ಅಮರೇಶ್ವರ ಮಹಾರಾಜ, ‘ಮಳೆಗಾಲ ಸಿದ್ದೇಶ್ವರ ದೇವರು ಪವಾಡ ಪುರುಷರಾಗಿದ್ದಾರೆ. ತಮ್ಮ ವಿಶೇಷ ಪವಾಡಗಳು ಹಾಗೂ ಜನರ ಕಷ್ಟಗಳನ್ನು ಪರಿಹರಿಸುವ ಮೂಲಕ ಅಥಣಿ ಹಾಗೂ ಸುತ್ತಮುತ್ತಲಿನ ಭಕ್ತರ ಆರಾಧ್ಯ ದೈವವಾಗಿದ್ದಾರೆ’ ಎಂದರು.

ADVERTISEMENT

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಗಳ ಮೆರವಣಿಗೆ ನಡೆಯಿತು. ಮುಖಂಡರಾದ ಅಮಸಿದ್ದ ವಡೇಯರ, ರಾಜು ತೆವರಟ್ಟಿ, ಶಿವಾಜಿ ಮಾಳಿ, ಆನಂದ ವಡೇಯರ, ಮುರುಗೇಶ ಮೋಳೆ, ಬಸವರಾಜ ದಿವಾನಮಳ, ಸಿದ್ದು ಕಾಗಲೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.