ಚಿಕ್ಕೋಡಿ: ಆಷಾಢ ಏಕಾದಶಿ ಅಂಗವಾಗಿ ಸುಕ್ಷೇತ್ರ ಪಂಢರಪುರದಲ್ಲಿ ವಿಠ್ಠಲನ ದರ್ಶನ ಪಡೆದು ಹಿಂದಿರುವಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜುಲೈ 18ರಂದು ನಡೆದಿದೆ.
ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಪಟ್ಟಣದ ನಿವಾಸಿ ಲಹು ರಾಮಾ ಬೇವಿನಕಟ್ಟಿ (62) ಮೃತಪಟ್ಟ ವ್ಯಕ್ತಿ.
ಲಹು ಬೇವಿನಕಟ್ಟಿ ಅವರು ಜುಲೈ 8 ರಂದು ಪಾದಯಾತ್ರೆ ಮೂಲಕ ಬೋರಗಾಂವ ಪಟ್ಟಣದಿಂದ ಹೊರಟು, ಸುಕ್ಷೇತ್ರ ಪಂಢರಪುರ ತಲುಪಿ, 17ರಂದು ವಿಠ್ಠಲ ರುಕ್ಮಿಣಿ ದರ್ಶನ ಪಡೆದುಕೊಂಡಿದ್ದರು. 18ರಂದು ಬೋರಗಾಂವ ಪಟ್ಟಣಕ್ಕೆ ಹೊರಡಲು ಅಣಿಯಾಗುತ್ತಿದ್ದಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಪಂಢರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಢಪುರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.