ADVERTISEMENT

ಸಾಂಬ್ರಾ | ₹ 60 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 5:07 IST
Last Updated 4 ಡಿಸೆಂಬರ್ 2022, 5:07 IST
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಶನಿವಾರ ಭೂಮಿಪೂಜೆ ನೆರವೇರಿಸಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಶನಿವಾರ ಭೂಮಿಪೂಜೆ ನೆರವೇರಿಸಿದರು   

ಸಾಂಬ್ರಾ:ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದಲ್ಲಿ ₹ 60 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಶನಿವಾರ ಚಾಲನೆ ನೀಡಿದರು.

‘ಚುನಾವಣೆ ಹತ್ತಿರ ಬಂದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಸರಣಿ ಮುಂದುವರಿದಿದೆ. ಪ್ರತಿ ದಿನ ಒಂದಿಲ್ಲೊಂದು ಊರಲ್ಲಿ ಕಾಮಗಾರಿಗಳಿಗೆ ಪೂಜೆ ಇಲ್ಲವೇ ಉದ್ಘಾಟನೆ ನಡೆಯುತ್ತಿದೆ. ಗುಣಮಟ್ಟದ ಕಾಮಗಾರಿಗೆ ಜನ ಸಹಕರಿಸಬೇಕು’ ಎಂದು ಶಾಸಕಿ ಮನವಿ ಮಾಡಿದರು.

ಗ್ರಾಮದ ಹಿರಿಯರಾದ ಮಹೇಶ ಪಾಟೀಲ, ಅಕ್ಷಯ ಪಾಟೀಲ, ಸಂಜಯ ಪಾಟೀಲ, ಎಂಜಿನಿಯರ್ ವೈಭವ, ಎಲ್.ಎನ್. ಪಾಟೀಲ, ಅಕ್ಷಯ ಕಣ್ಣೂರಕರ್, ಅಲ್ಕಾ ಲಾಮಜಿ, ವಿಠ್ಠಲ, ರಮೇಶ ಕಣ್ಣೂರಕರ್, ಮಹಾದೇವ ಪಾಟೀಲ, ಅಜಿತ್ ಪಾಟೀಲ ಇದ್ದರು.

ADVERTISEMENT

₹5 ಲಕ್ಷ ಪರಿಹಾರ: ಕಲ್ಲೆಹೋಳ ಗ್ರಾಮದ ರಾಜು ಕಾಚು ಹಣ್ಣೂರಕರ್ ಎಂಬ ರೈತ ಆರು ತಿಂಗಳ ಹಿಂದೆ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ನೀಡಲಾದ ₹ 5 ಲಕ್ಷದ ಪರಿಹಾರ ಧನದ ಚೆಕ್‌ ಅನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಶನಿವಾರ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.