
ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು
ಅಥಣಿ: ಜಗತ್ತಿನಲ್ಲಿಯೇ ಆದರ್ಶ ವ್ಯಕ್ತಿ, ಶಿವಾಜಿ ಮಹಾರಾಜರು. ಅವರ ಶೌರ್ಯ, ಪರಾಕ್ರಮ, ಧೈರ್ಯ, ಆದರ್ಶ ಇಂದಿನ ಯುವಕರಿಗೆ ಪ್ರೇರಣೆಯಾಗಲಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ 396 ನೇ ಜಯಂತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಶಿವಾಜಿ ಮಹಾರಾಜರವರ ಪುತ್ಥಳಿ ಅನಾವರಣ ಈಗಾಗಲೇ ಜರುಗಿದ್ದು ಹೆಮ್ಮೆಯ ಸಂಗತಿ. ಪುತ್ಥಳಿ ನಿರ್ಮಾಣಕ್ಕೆ ಸಹಾಯ ಸಹಕಾರ ಸಲ್ಲಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆ ಮಾರಾಠಾ ಸಮಾಜಕ್ಕೆ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಾಜ ಭವನ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.
ಶೀಘ್ರ ಸ್ಥಳ ಗುರುತಿಸಿ ಸಮಾಜದವರು ಸ್ಥಳದ ದಾಖಲೆ ನೀಡಬೇಕು. ಬರುವ ಶಿವಾಜಿ ಜಯಂತಿಯಂದು ಎಲ್ಲರೂ ಸೇರಿ ಭೂಮಿಪೂಜೆ ಮಾಡೋಣ ಎಂದು ಸವದಿ ಹೇಳಿದರು.
ಆರ್ ಎಸ್ ಎಸ್ ಮುಖಂಡರಾದ ಅರವಿಂದರಾವ ದೇಶಪಾಂಡೆ ಮಾತನಾಡಿ, ಶಿವಾಜಿ ಮಹಾರಾಜರ ಆದರ್ಶ ತತ್ವಗಳನ್ನು ಇಂದಿನ ಯುವ ಪೀಳಿಗೆ ಆಚರಿಸುವ ಅಗತ್ಯವಿದೆ ಎಂದರು. ಈ ವೇಳೆ ಬಣಜವಾಡ ಶಿಕ್ಷಣ ಸಂಸ್ಥೆಯ ಮಕ್ಕಳು ಶಿವಾಜಿ ಮಹಾರಾಜ್ ಹಾಗೂ ಸಂಭಾಜಿ ಮಹಾರಾಜರ ಹೋರಾಟದ ಸನ್ನಿವೇಶ ಸಾದರ ಪಡಿಸಿದರು.
ದಿಗ್ವಿಜಯಸಿಂಗ ಪವಾರ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪ್ರಭಾಕರ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾನಾಸಾಬ ಅವತಾಡೆ, ಸಿದ್ದು ಪಾಟೀಲ, ರವಿ ಪೂಜಾರಿ, ಅರುಣ ಯಲಗುದ್ರಿ, ದತ್ತಾ ವಾಸ್ಟರ್, ಮುರುಗೇಶ ಕುಮಠಳ್ಳಿ, ರಾವಸಾಬ ಐಹೊಳೆ, ಸತ್ಯಪ್ಪ ಬಾಗೇನ್ನವರ, ಆರ್ ಎಂ ಡಾಂಗೆ, ಉಮೇಶರಾವ ಬಂಟೋಡ್ಕರ, ಸಂಪತಕುಮಾರ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.