ADVERTISEMENT

ಸತ್ತಿಗೇರಿ: ₹90 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 5:56 IST
Last Updated 12 ಫೆಬ್ರುವರಿ 2026, 5:56 IST
ಸತ್ತಿಗೇರಿ ಸಮೀಪದ ಕೊಡ್ಲಿವಾಡ ಗ್ರಾಮದಲ್ಲಿ ₹90 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಬುಧವಾರ ಭೂಮಿಪೂಜೆ ನೆರವೇರಿಸಿದರು
ಸತ್ತಿಗೇರಿ ಸಮೀಪದ ಕೊಡ್ಲಿವಾಡ ಗ್ರಾಮದಲ್ಲಿ ₹90 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಬುಧವಾರ ಭೂಮಿಪೂಜೆ ನೆರವೇರಿಸಿದರು   

ಸತ್ತಿಗೇರಿ: ಸಮೀಪದ ಕೊಡ್ಲಿವಾಡ ಗ್ರಾಮದ ಶಾಲೆಯಿಂದ ಕಾಲುವೆವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಬುಧವಾರ ಭೂಮಿಪೂಜೆ ನೆರವೇರಿಸಿದರು.

‘ಕ್ಷೇತ್ರದ ಹಳ್ಳಿಗಳ ರಸ್ತೆ ಸಂಪರ್ಕವನ್ನು ಬಲಪಡಿಸುವುದು ನಮ್ಮ ಗುರಿ. ಕೊಡ್ಲಿವಾಡದ ಕಾಮಗಾರಿಗೆ ​ಸುಮಾರು ₹90 ಲಕ್ಷ ಅಂದಾಜು ವೆಚ್ಚ ನಿಗದಿ ಮಾಡಲಾ‌ಗಿದೆ. ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸಲು ಸಹಕಾರಿಯಾಗಲಿದೆ’ ಎಂದರು.

‘ಗುತ್ತಿಗೆದಾರು ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದೂ ಸೂಚಿಸಿದರು.

ADVERTISEMENT

ಬಸವರಾಜ ಸತ್ತೂರಿ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪ್ರಕಾಶ ವಾಲಿ, ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿ ಎಚ್.ಎ. ಕದ್ರಾಪೂರಕರ, ಬಸವರಾಜ ಅಯ್ಯನಗೌಡ್ರ, ಗ್ರಾಮದ ಹಿರಿಯರಾದ ಹನಮಂತ ರಂಗಾಪೂರ, ಅಜ್ಜಪ್ಪ ಬಂಗೆಪ್ಪಗೋಳ, ಬಾಳೇಶ ಕೌಜಲಗಿ, ಸಿದ್ದಪ್ಪ ಅಂಗಡಿ, ಸಂಗಪ್ಪ ಹಳೇಮನಿ, ರವಿ ಹಿರೇಮಠ, ಅರ್ಜುನ ಆಲದಕಟ್ಟಿ, ಈರನಗೌಡ ಪಾಟೀಲ, ಹನಮಂತ ಕುರಿ, ಬಾಳಪ್ಪ ಸೊಪ್ಪಡ್ಲ, ದುಂಡಪ್ಪ ಬಗನಾಳ, ಸಿಂಧೂರ ತೆಗ್ಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.