ADVERTISEMENT

ಬೆಳಗಾವಿ: ಅಣಕು ಪರೀಕ್ಷೆ 28ರಂದು

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 6:49 IST
Last Updated 26 ಜುಲೈ 2021, 6:49 IST

ಬೆಳಗಾವಿ: ನಗರದ ಮರಾಠಾ ಮಂಡಳ ಎಂಜಿನಿಯರಿಂಗ್ ಕಾಲೇಜು ವತಿಯಿಂದಪಿಯುಸಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ (ಸಿಇಟಿ, ಜೆಇಇ, ನೀಟ್) ಆನ್‌ಲೈನ್‌ನಲ್ಲಿ ಉಚಿತವಾಗಿ ಅಣಕು ‍ಪರೀಕ್ಷೆಗಳ ಸರಣಿ ಆಯೋಜಿಸಲಾಗಿದೆ.

ಅನುಭವಿ ಅಧ್ಯಾಪಕರು ನಡೆಸುವರು. ಜುಲೈ 28ರಂದು ಸಂಜೆ 5ಕ್ಕೆ ಆರಂಭವಾಗಲಿದ್ದು, ಮನೆಯಲ್ಲಿ ಕುಳಿತೇ ಹಾಜರಾಗಬಹುದು. ಮುಗಿದ ನಂತರ ತಕ್ಷಣವೇ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಹಾಜರಾದ ಪ್ರತಿಯೊಬ್ಬರಿಗೂ ಇ-ಪ್ರಮಾಣಪತ್ರ ನೀಡಲಾಗುವುದು. ಅಲ್ಲದೆ ಅತಿ ಹೆಚ್ಚು ಅಂಕ ಪಡೆದು ಪಾಸಾದವರಿಗೆ ₹ 10ಸಾವಿರದವರೆಗೆ ಬಹುಮಾನ ನೀಡಲಾಗುವುದು. ನೋಂದಣಿಗೆ ಶುಲ್ಕ ಇರುವುದಿಲ್ಲ. ಆಸಕ್ತರು https://ggle.io/4BNJ ಲಿಂಕ್ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಪ್ರೊ.ವೀರೇಶ, ಮೊ.ಸಂಖ್ಯೆ: 9902383309/9945126695 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.