ADVERTISEMENT

ಎಂ.ಕೆ.ಹುಬ್ಬಳ್ಳಿ: ಮೊಹರಂ ಆಚರಿಸಿದ ಹಿಂದೂ-ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:17 IST
Last Updated 7 ಜುಲೈ 2025, 2:17 IST
ಮೊಹರಂ ಹಬ್ಬದ ಅಂಗವಾಗಿ ಎಂ.ಕೆ.ಹುಬ್ಬಳ್ಳಿ ಪಟ್ಟಣದ ವಿವಿಧೆಡೆ ಸ್ಥಾಪಿಸಿದ್ದ ಪಂಜಾ ದೇವರು ಮತ್ತು ಡೋಲಿಗಳು ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಒಂದುಗೂಡಿದ್ದವು
ಮೊಹರಂ ಹಬ್ಬದ ಅಂಗವಾಗಿ ಎಂ.ಕೆ.ಹುಬ್ಬಳ್ಳಿ ಪಟ್ಟಣದ ವಿವಿಧೆಡೆ ಸ್ಥಾಪಿಸಿದ್ದ ಪಂಜಾ ದೇವರು ಮತ್ತು ಡೋಲಿಗಳು ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಒಂದುಗೂಡಿದ್ದವು   

ಎಂ.ಕೆ.ಹುಬ್ಬಳ್ಳಿ: ಭಾನುವಾರ ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಮರು ಒಗ್ಗೂಡಿ ಭಕ್ತಿಯಿಂದ ಆಚರಿಸಿದರು.

ಪಂಜಾಗಳನ್ನು ಮತ್ತು ಡೋಲಿಗಳನ್ನು ಹೊತ್ತು ಪಟ್ಟಣದೆಲ್ಲೆಡೆ ಮೆರವಣಿಗೆ ನಡೆಸಲಾಯಿತು. ಬೆಂಕಿಯ ಕೆಂಡ ಹಾಯ್ದು ಭಕ್ತಿ ಸಮರ್ಪಿಸಲಾಯಿತು. ತ್ಯಾಗ ಬಲಿದಾನ ಪ್ರತೀಕವಾದ ಹಬ್ಬವನ್ನು ಹಿಂದೂ-ಮುಸ್ಮಿಮರು ಒಟ್ಟುಗೂಡಿ ಆಚರಿಸಿ ಭಾವೈಕ್ಯ ಮೆರೆದರು.

ಕಳೆದ ಐದು ದಿನಗಳಿಂದ ಪಟ್ಟಣದ ವಿವಿಧೆಡೆ ಪಂಜಾಗಳನ್ನು ಸ್ಥಾಪಿಸಿ ಪೂಜಿಸಲಾಯಿತು. ಕೊನೆಯ ದಿನವಾದ ಭಾನುವಾರ ಪಟ್ಟಣದೆಲ್ಲೆ ಮೆರವಣಿಗೆ ನಡೆಸಿ ಸಂಜೆ ಮಲಪ್ರಭಾ ನದಿಗೆ ಹೋಗಿ ಹಬ್ಬವನ್ನು ಪೂರ್ಣಗೊಳಿಸಲಾಯಿತು.

ADVERTISEMENT

ಮಾರ್ಗದುದ್ದಕ್ಕೂ ಲೇಜಿಮ್, ಝಾಂಜ್ ಪಥಕ ಮತ್ತು ಭಕ್ತಿಯ ಪದಗಳು ವಾದ್ಯಗಳು ಮೊಳಗಿದವು. ಸಾಲುಗಟ್ಟಿ ಸಾಗಿದ ಐದು ಡೋಲಿಗಳ ಮತ್ತು ಪಾಂಜಾಗಳ ಮುಂದೆ ಒಣ ಕೊಬ್ಬರಿ ಸುಟ್ಟು ಭಕ್ತರು ಹರಕೆ ತಿರಿಸಿದರು. ಅಪಾರ ಜನರು ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

೬ಎAಕೆಎಚ್1 ಮೊಹರಂ ಹಬ್ಬದ ನಿಮಿತ್ತ ಎಂ.ಕೆ.ಹುಬ್ಬಳ್ಳಿ ಪಟ್ಟಣದ ವಿವಿದೇಡೆ ಸ್ಥಾಪಿಸಿದ್ದ ಫಂಝಾ ದೇವರು ಮತ್ತು ಡೋಲಿಗಳು ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಒಂದುಗೂಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.