ಮೂಡಲಗಿ: ‘ಮೂಡಲಗಿ ಕೋ ಆಪರೇಟಿವ್ ಬ್ಯಾಂಕ್ ಮುಕ್ತಾಯವಾದ ಆರ್ಥಿಕ ವರ್ಷದಲ್ಲಿ ₹75.24 ಲಕ್ಷ ಲಾಭ ಗಳಿಸಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಸುಭಾಷ ಢವಳೇಶ್ವರ ತಿಳಿಸಿದ್ದಾರೆ.
ಬ್ಯಾಂಕ್‌ನ ಸಭಾಭವನದಲ್ಲಿ ಬುಧವಾರ ಜರುಗಿದ 75ನೇ ವರ್ಷದ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿ, ‘ಬ್ಯಾಂಕ್ ಷೇರು ಬಂಡವಾಳ ₹2.48 ಕೋಟಿ, ನಿಧಿಗಳು ₹8.82 ಕೋಟಿ, ದುಡಿಯುವ ಬಂಡವಾಳ ₹153.18 ಕೋಟಿ, ಗುಂತಾವಣಿಗಳು ₹48.66 ಕೋಟಿ, ಠೇವುಗಳು ₹136.60 ಕೋಟಿ ಇದ್ದು, ವಿವಿಧ ಕ್ಷೇತ್ರಗಳ ಗ್ರಾಹಕರಿಗೆ ₹85.73 ಕೋಟಿ ಸಾಲ ವಿತರಿಸಲಾಗಿದೆ. ಲೆಕ್ಕಪರಿಶೋಧನೆಯಲ್ಲಿ ‘ಅ’ ಶ್ರೇಯಾಂಕ ಪಡೆದುಕೊಂಡಿದೆ’ ಎಂದರು.
‘ಬ್ಯಾಂಕ್‌ನ ಅನುತ್ಪಾದಕ ಆಸ್ತಿಯು ಶೇ 0.42 ಮತ್ತು ಸುಸ್ತಿಬಾಕಿ ಶೇ 1.84 ಇದೆ. 3 ಶಾಖೆಗಳನ್ನು ಹೊಂದಿದ್ದು ಎಲ್ಲವೂ ಪ್ರಗತಿಯಲ್ಲಿವೆ’ ಎಂದರು.
ಲೆಕ್ಕ ಪರಿಶೋಧಕರಾದ ಉಮೇಶ ಬೋಲಮಲ್, ಸೈದಪ್ಪ ಗದಾಡಿ ಮಾತನಾಡಿ, ‘ಸಹಕಾರ ಕಾಯ್ದೆ ಮತ್ತು ರಿಸರ್ವ್ ಬ್ಯಾಂಕ್ ನಿಯಮ ಪಾಲಿಸುವ ಮೂಡಲಗಿ ಕೋ ಆಪರೇಟಿವ್ ಬ್ಯಾಂಕ್ ಗ್ರಾಹಕರ ವಿಶ್ವಾಸ ಗಳಿಸಿದೆ’ ಎಂದರು.
ಬ್ಯಾಂಕ್ ಉಪಾಧ್ಯಕ್ಷ ನವೀನ ಬಡಗನ್ನವರ, ನಿರ್ದೇಶಕರಾದ ಕೆ.ವಿ. ದಂತಿ, ಶಿವಲಿಂಗಪ್ಪ ಗಾಣಿಗೇರ, ರಾಚಯ್ಯ ನಿರ್ವಾಣಿ, ರುದ್ರಪ್ಪ ವಾಲಿ, ಹರೀಶ ಅಂಗಡಿ, ಮಹ್ಮದರಫಿಕ ತಾಂಬೋಳಿ, ರಾಚಪ್ಪ ಬೆಳಕೂಡ, ಗಿರೀಶ ಅಂಬಿ, ಪ್ರಭಾವತಿ ಮುಧೋಳ, ದಾನೇಶ್ವರಿ ಸತರಡ್ಡಿ, ಮಾಲಕ್ಕಾ ಪೋಳ, ಈರಪ್ಪ ಪಾಟೀಲ, ಪ್ರಧಾನ ವ್ಯವಸ್ಥಾಪಕ ಗೌಡಪ್ಪ ಬುದ್ನಿ, ಸಿಬ್ಬಂದಿ ಎಂ.ಬಿ. ಮಡಿವಾಳರ, ಎಸ್.ಎಂ. ಹಿರೇಮಠ, ಸಿ.ಬಿ. ಢವಳೇಶ್ವರ, ಬಸಲಿಂಗಪ್ಪ ಸಂಕನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.