ADVERTISEMENT

ಮೂಡಲಗಿ | ದಸ್ತು ಬರಹಗಾರರ ಮುಷ್ಕರ: ಬಿಕೋ ಎನ್ನುತ್ತಿದೆ ಉಪನೋಂದಣಿ ಕಚೇರಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 2:43 IST
Last Updated 13 ಡಿಸೆಂಬರ್ 2025, 2:43 IST
<div class="paragraphs"><p>ಮೂಡಲಗಿ ಪಟ್ಟಣದ ಉಪನೋಂದಣಿ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸ್ತು ಬರಹಗಾರರು ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು</p></div>

ಮೂಡಲಗಿ ಪಟ್ಟಣದ ಉಪನೋಂದಣಿ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸ್ತು ಬರಹಗಾರರು ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು

   

ಮೂಡಲಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸ್ತು ಬರಹಗಾರರು ಉಪ ನೋಂದಣಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಶುಕ್ರವಾರ 2ನೇ ದಿನ ಮುಂದುವರೆಯಿತು.

ಮುಷ್ಕರದಿಂದಾಗಿ ಸಾರ್ವಜನಿಕರು ಹಾಗೂ ಸಹಕಾರ ಸಂಘ, ಬ್ಯಾಂಕ್‌ ವ್ಯವಹಾರಕ್ಕೆ ತೀವ್ರ ತೊಂದೆ ಉಂಟಾಗಿತ್ತು. ಜಮೀನು ಖರೀದಿ, ಮಾರ್ಟಗೇಜ್‌ ಸೇರಿದಂತೆ ಇನ್ನಿತರ ನೋಂದಣಿ ಕಾರ್ಯಗಳೆಲ್ಲ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಯಾವುದೇ ಕೆಲಸವಾಗದೆ ಮರಳಬೇಕಾಯಿತು. ಉಪ ನೋಂದಣಿ ಕಚೇರಿಯು ಸಾರ್ವಜನಿಕರು ಇಲ್ಲದೆ ಬಿಕೋ ಎನ್ನುತಿತ್ತು.

ADVERTISEMENT

ಸರ್ಕಾರವು ದಸ್ತು ಬರಹಗಾರರ ಬೇಡಿಕೆಗಳ ಈಡೇರಿಸಿ ಸಾರ್ವಜನಿಕರ ನೋಂದಣಿ ಕಾರ್ಯಗಳು ಸ್ಥಗಿತವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರ ಬರಹಗಾರಾದ ಪಿ.ಬಿ.ಹಿರೇಮಠ, ಆರ್.ಎಂ.ಕುಲಕರ್ಣಿ, ಎಲ್.ಸಿಗಾಡವಿ, ಕೆ.ಎಸ್.ಹುಬಳಿ, ಎಂ.ಎನ್.ಶಿರಸಂಗಿ, ರಾಜು ಅಥಣಿ, ಎಸ್.ಬಿ.ಸಿದ್ದುಮಾಳಿ, ಎಸ್.ಎನ್.ಗೋಟಡಕಿ, ಎ.ಎಂ.ಥರಥರಿ, ಆರ್.ಎಂ. ಮಂಗಸೂಳಿ, ವಿ.ಎಸ್.ಶಿರಸಂಗಿ, ಜೆ.ಬಿ.ಗೋಕಾಕ, ಪರಶುರಾಮ ಮಡಿವಾಳರ, ಅಭಿನವ ಚಿಂಚಲಿ, ಶಿವಾನಂದ ಸಸಾಲಟ್ಟಿ, ಶಿವಾನಂದ ಸಣ್ಣಕ್ಕಿ, ಬಸವರಾಜ ಮುಧೋಳ, ಮಹಾದೇವ ನವನಿ, ಬಸವರಾಜ ಅಳಗೋಡಿ, ಸಂಜು ಅಂಗಡಿ, ಗುರುಸಿದ್ದ ತುಪ್ಪದ, ಸಂಜಯ ಪಾರ್ಶಿ, ಕುಮಾರ ಜಂಗನವರ, ದರ್ಶನ ಹಟ್ಟಿ, ರಮೇಶ ಸನ್ನಮಾನಿ, ರವಿ ಶಾಬನ್ನವರ, ಈರಪ್ಪ ಪಾರ್ಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.