ADVERTISEMENT

ಮೂಡಲಗಿ | ಉದ್ಯೋಗ ಮೇಳ ಸೆ. 26ಕ್ಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:12 IST
Last Updated 23 ಸೆಪ್ಟೆಂಬರ್ 2025, 6:12 IST
   

ಮೂಡಲಗಿ: ಇಲ್ಲಿಯ ಚೈತನ್ಯ ಐಟಿಐ ಕಾಲೇಜುದಲ್ಲಿ 20ಕ್ಕೂ ಅಧಿಕ ಸಂಖ್ಯೆಯ ರಾಷ್ಟ್ರೀಯ ಮತ್ತು ಅಂತrರಾಷ್ಟ್ರೀಯ ಮಟ್ಟದ ಕಂಪನಿಗಳ ಸಹಯೋಗದಲ್ಲಿ ಇದೇ ಸೆ. 26ರಂದು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿಬಿಎ, ಎಂಬಿಎ, ಬಿಸಿಎ, ಬಿ.ಕಾಮ್‌, ಎಂ.ಎ, ಬಿ.ಇಡಿ ಸೇರಿದಂತೆ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಪದವಿಧರ ನಿರುದ್ಯೋಗ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗಾಗಿ ಮೊ.9964166679, 7795772577 ಸಂಪರ್ಕಿಸಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.