
ಮುನವಳ್ಳಿ: ಗೊಂದಿ ಗ್ರಾಮದಲ್ಲಿ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ಮಂಗಳವಾರ ಜರುಗಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಅವರ ಪಾಲಕರೊಂದಿಗೆ ಅಭಿವ್ಯಕ್ತಗಳಿಸುವ ವಿನೂತನ ಕಾರ್ಯಕ್ರಮವಾಗಿದ್ದು ಮಕ್ಕಳೊಂದಿಗೆ ಪಾಲಕರು ಪಾಲ್ಗೊಂಡಿದ್ದು ವಿಶೇಷವಾಗಿದೆ. ಮಕ್ಕಳ ಕಲಿಕೆಯಲ್ಲಿ ಪಾಲಕರು ಸಹಕರಿಸಬೇಕು. ಅವರಿಗಾಗಿ ಕೆಲವು ಸಮಯವನ್ನು ಪಾಲಕರು ಮೀಸಲಿಡಬೇಕು ಎಂದರು.
ಗ್ರಾ.ಪಂ ಸದಸ್ಯ ಉಮೇಶ ದಂಡಿನ, ಬಿ.ಎನ್.ಬ್ಯಾಳಿ, ಸುಧೀರ ವಾಘೇರಿ, ಮೀನಾಕ್ಷಿ ಮುರನಾಳ, ಎಂ.ಎಸ್.ಹೊಂಗಲ ಮಕ್ಕಳ ಕಲಿಕೆಯ ಬಗ್ಗೆ ಮಾತನಾಡಿದರು.
ಮಂಜುನಾಥ ಗಡದೆ, ಸರಸ್ವತಿ ತಾಂದಳೆ, ಲಕ್ಷ್ಮಣ ಕಟಿಗೆನ್ನವರಮ ಪಂಚು ಲವಟೆ, ಪಂಚು ಹೂಲಿ, ಮಲ್ಲೇಶಪ್ಪ ತಾಂದಳೆ, ಶಿವಪ್ಪ ಕಟ್ಟೇಕಾರ, ಬಸವರಾಜ ದಂಡಿನ, ಮಹಾದೇವಿ ತಾಂದಳೆ, ಮಾಳೇಶ ದಂಡಿನ, ವಿಠ್ಠಲ ವಾಘ್ಮೋಡಿ, ಹೂವಪ್ಪ ಬಂಡಗಾರ, ಅಪ್ಪಣ್ಣ ಅಮಾತಿ, ತಿಪ್ಪಣ್ಣ ದಂಡಿನ, ಕೃಷ್ಣಪ್ಪ ಬೆಹರೆ, ಶ್ರೀಮಂತ ದಂಡಿನ, ಸುರೇಶ ಬಾಳಿಕಾಯಿ, ಉಮೇಶ ಗಡದೆ, ಗಿರೀಶ ಗಡದೆ, ಮಹಾದೇವಿ ಹುಕ್ಕೇರಿ, ಮಹಾಂತೇಶ ಯಡಾಲ, ಮಿನಾಕ್ಷಿ ದಂಡಿನ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.