
ಮುನವಳ್ಳಿ: ‘ಪಟ್ಟಣದಲ್ಲಿ ಯಾತ್ರಿ ನಿವಾಸಕ್ಕೆ ಮುಜರಾಯಿ ಇಲಾಖೆಯಿಂದ ₹20 ಲಕ್ಷ ಅನುದಾನ ಒದಗಿಸಿದ್ದು, ಕಾಳಿಕಾದೇವಿ ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗೆ ₹30 ಲಕ್ಷ ಅನುದಾನ ನೀಡಲಾಗುವುದು’ ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.
ಇಲ್ಲಿ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ, ಗಾಯತ್ರಿ ಮಹಿಳಾ ಮಂಡಳ, ವಿಶ್ವಕರ್ಮ ಯುವಕ ಮಂಡಳ, ವಿಶ್ವಕರ್ಮ ಸಮಾಜದ ವತಿಯಿಂದ ಕಾಳಿಕಾದೇವಿ ಜಾತ್ರಾ ಮಹೋತ್ಸವ, ಸಾಮೂಹಿಕ ಉಪನಯನ ಹಾಗೂ ಯಾತ್ರಿನಿವಾಸ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಉದ್ಯಮಿ ವೀರೇಶ ಬ್ಯಾಹಟ್ಟಿ, ದೇವಸ್ಥಾನಕ್ಕೆ ವಿದ್ಯುತ್ ಜನರೇಟರ್ ನೀಡುವ ಭರವಸೆ ನೀಡಿದರು. ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೌನೇಶ ಮಾಯಾಚಾರಿ ಅಧ್ಯಕ್ಷತೆ ವಹಿಸಿದ್ದರು. 46 ವಟುಗಳಿಗೆ ಉಪನಯನ ಜರುಗಿತು. ದೇವಿಗೆ ವಿಶೇಷ ಅಲಂಕಾರ ಪೂಜೆ, ಪಲ್ಲಕ್ಕಿ ಉತ್ಸವ, ಕಾರ್ತೀಕೋತ್ಸವ ಹಾಗೂ ಮಹಾಪ್ರಸಾದ ಜರುಗಿತು.
ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ಸವದತ್ತಿ ಎ.ಪಿ.ಎಂ.ಸಿ, ಅಧ್ಯಕ್ಷ ಚಂದ್ರು ಜಂಬ್ರಿ, ಡಿ.ಡಿ. ಕಿನ್ನೂರಿ, ರಾಮಲಿಂಗ ಕೋರೆ, ವಿನಾಯಕ ಪತ್ತಾರ, ಕಾಳಪ್ಪ ಬಡಿಗೇರ, ಮಂಜುನಾಥ ಮೌನೇಶ ಬಡಿಗೇರ, ಜಗದೀಶ ಬಡಿಗೇರ, ನಾರಾಯಣ ಕಮ್ಮಾರ, ನಾಗರಾಜ ಬಡಿಗೇರ, ಅರ್ಜುನ ಬಡಿಗೇರ, ನಾಗು ಹಿರೂರ, ಮಂಜುನಾಥ ಶಹಾಪೂರ, ಮಹಾಂತೇಶ ಬಡಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.