
ಮುನವಳ್ಳಿ: ಯಕ್ಕೇರಿಯ ಕರಿಯಮ್ಮ ನಗರದಲ್ಲಿ ವರವಿ ಕನಕ ಮಹಾಲಕ್ಷ್ಮೀದೇವಿ ದೇವಸ್ಥಾನದ 7ನೇ ವಾರ್ಷಿಕ ಜಾತ್ರಾ ಮಹೋತ್ಸವ ಫೆ.27ರಿಂದ ಮಾರ್ಚ್ 1ರ ವರೆಗೆ ನಡೆಯಲಿದೆ.
ಫೆ.27ರಂದು ಯಾಗಶಾಲೆ ಸಿದ್ದತೆ ಹಾಗೂ ಕಲಶ ಸ್ಥಾಪನೆ, ಫೆ.28ರಂದು ಬೆೆಳಿಗ್ಗೆ ಪ್ರಾತಕಾಲದಲ್ಲಿ ಮಹಾಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಮಾತೃಕಾ ಪೂಜೆ, ದೇವನಾಂದಿ, ಅಗ್ನಿಪ್ರತಿಷ್ಠಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 5 ಗಂಟೆಗೆ ವರವಿ ಕನಕ ಮಹಾಲಕ್ಷ್ಮಿ ಆಹ್ವಾನ ಜರುಗುವುದು.
ಮಾರ್ಚ್ 1ರಂದು ಆಹ್ವಾಹಿತ ದೇವತಾ ಪೂಜಾ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ತೀರ್ಥಪ್ರಸಾದ ಹಾಗೂ ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಸಾನ್ನಿಧ್ಯವನ್ನು ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳು, ನವಲಗುಂದದ ವೀರೇಂದ್ರ ಶ್ರೀಗಳು, ಸವದತ್ತಿಯ ಪ್ರಸನ್ನ ದೀಕ್ಷಿತರು, ಗೊರವನಕೊಳ್ಳದ ಶಿವಾನಂದ ಶ್ರೀಗಳು, ವಹಿಸುವರು, ದೈವಿಕತ್ವವನ್ನು ಶ್ರೀ ಶೇಷಗಿರಿ ಜೋಷಿ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.