ADVERTISEMENT

ಅಥಣಿ: ಏ.24ರಂದು ಮುರುಘೇಂದ್ರ ಶಿವಯೋಗಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 15:37 IST
Last Updated 23 ಏಪ್ರಿಲ್ 2024, 15:37 IST
ಪೋಟೊ ಶೀರ್ಷಿಕೆ(೨೩ಅಥಣಿ೨);-ಅಥಣಿ ಮಾಹಾ ತಪಸ್ವಿ ಮುರಘೇಂದ್ರ ಶಿವಯೋಗಿಗಳ ಭಾವಚೀತ್ರ
ಪೋಟೊ ಶೀರ್ಷಿಕೆ(೨೩ಅಥಣಿ೨);-ಅಥಣಿ ಮಾಹಾ ತಪಸ್ವಿ ಮುರಘೇಂದ್ರ ಶಿವಯೋಗಿಗಳ ಭಾವಚೀತ್ರ   

ಅಥಣಿ: ಇಲ್ಲಿನ ಗಚ್ಚಿನಮಠದಿಂದ ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಏ.24ರಂದು ಸಂಜೆ 7 ಗಂಟೆಗೆ ನಡೆಯಲಿದೆ.

ಬೆಳಿಗ್ಗೆ ಇಂಗಳಗಾಂವದಿಂದ ಶಿವಯೋಗಿಗಳ ಬಾಲಮೂರ್ತಿಯನ್ನು ಅಥಣಿಯ ಗಚ್ಚಿನಮಠಕ್ಕೆ ಉತ್ಸವದೊಂದಿಗೆ ತರಲಾಗುತ್ತದೆ. ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಲಿಂ. ಚನ್ನಬಸವ ಸ್ವಾಮಿ ಅವರ 44 ನೇ ಸ್ಮರಣೋತ್ಸವದ ಅಂಗವಾಗಿ ಗದ್ದುಗೆಗೆ ಅಭಿಷೇಕ, ಮಹಾಪೂಜೆ ಮತ್ತು ಗಣಾರಾಧನೆ ಜರುಗಲಿದೆ.

ರಥೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು  ಉಚಿತವಾಗಿ ಸೇವೆ ಸಲ್ಲಿಸಲಿದ್ದು, ರಥ ಸಾಗುವ ದಾರಿಯಲ್ಲಿ ಅಂಗಡಿಗಳು  ತೆರದಿರುತ್ತವೆ. ಏ.25 ಮುಂಜಾನೆ 4 ಗಂಟೆಗೆ ಪರಾತನೇಶ್ವರ ದೇವಾಲಯ ತಲುಪಲಿದೆ. ಅಂದು  ಓಟದ ಸ್ಪರ್ಧೆ, ಸೆಕಲ್ ಶರ್ಯತ್ತು, ಜೋಡು ಕುದುರೆಗಾಡಿ ಶರ್ಯತ್ತು ಆಯೋಜಿಸಲಾಗಿದೆ. 26ರಂದು ಜೋಡು ಎತ್ತಿನ ಗಾಡಿ ಶರ್ಯತ್ತು ನಡೆಯಲಿದೆ.

ADVERTISEMENT

ದನಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, 27ರಂದು ಬೆಳಿಗ್ಗೆ ರಥ ಗವಿಮಠದಿಂದ ಗಚ್ಚಿಮಠಕ್ಕೆ ಮರಳಲಿದ್ದು, ಜಂಗಿ ನಿಕಾಲಿ ಕುಸ್ತಿ ಹಮ್ಮಿಕೊಳ್ಳಲಾಗಿದೆ. ಉತ್ತಮ ಜಾನುವಾರಗಳಿಗೆ ಪಾರಿತೋಷಕ ವಿತರಿಸಲಾಗುವುದು. ರಾತ್ರಿ  ಪುರಾಣ ಪ್ರವಚನ, ಶಿವಾನುಭವ, ಭಜನೆ, ಬಯಲಾಟ ಜರುಗಲಿವೆ. ಗಚ್ಚಿನಮಠದ ಶಿವಬಸವ ಸ್ವಾಮೀಜಿ ನೇತೃತ್ವ ವಹಿಸುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.