
ಹುಕ್ಕೇರಿ: ‘ಮೈಸೂರು ಅರಮನೆಗೂ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೂ ಅವಿನಾಭವ ಸಂಬಂಧವಿದೆ. ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಇಲ್ಲಿಯವರಾಗಿದ್ದರೂ, ಮೈಸೂರಿನ ಸಂಸ್ಕೃತಿಯನ್ನು ಉತ್ತರ ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಸಂಸದ ಯದವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು.
ಗುರುಶಾಂತೇಶ್ವರ ಮಠದ ‘ಹುಕ್ಕೇರಿಶರ ಉತ್ಸವ’ದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ‘ಮೈಸೂರು ದಸರಾ ಇಡೀ ವಿಶ್ವಕ್ಕೆ ಹೆಸರಾಗಿದ್ದರೆ, ಹುಕ್ಕೇರಿ ಹಿರೇಮಠದ ದಸರಾ ಸಾಮರಸ್ಯದ ಜತೆ ಹೆಸರಾಗಿರುವುದು ಅಭಿಮಾನದ ಸಂಗತಿ’ ಎಂದರು.
ಮಠಕ್ಕೆ ಭೇಟಿ: ಇದೇ ಸಂದರ್ಭದಲ್ಲಿ ಮೈಸೂರಿನ ಮಹಾರಾಜರು ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿದಾಗ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ಮೈಸೂರಿನ ಮಹಾರಾಜರು ನಾಡಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಮೈಸೂರಿನ ದೊರೆ ಕೇವಲ ಮೈಸೂರಿಗೆ ಅಷ್ಟೇ ಮಾತ್ರ ಸೀಮಿತವಾಗಿಲ್ಲ, ಇಡೀ ಕರುನಾಡಿನ ದೊರೆ ಎನಿಸಿಕೊಂಡಿದ್ದರು. ಅದರ ಕುಡಿ ಇಂದು ಮಠಕ್ಕೆ ಬಂದಿರುವುದು ಸಂತಸ ತಂದಿದೆ’ ಎಂದರು.
ಒಡೆಯರು ಗುರುಶಾಂತೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಹಾಗೂ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಿಗಿ, ಸಂಘದ ನಿರ್ದೇಶಕರಾದ ಪೃಥ್ವಿ ಕತ್ತಿ, ಶಿವಾನಂದ ಮುಡಸಿ, ಗಜಾನನ ಕ್ವಳ್ಳಿ, ಆರ್.ಇ.ನೇಮಿನಾಥ ಖೆಮಲಾಪುರೆ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ್ ಬ್ಯಾಳಿ, ವಕೀಲರಾದ ಭೀಮಸೇನ ಬಾಗಿ, ಸಿದ್ದಪ್ಪ ಏಗನ್ನವರ, ಸುನೀಲ ಪರ್ವತರಾವ್, ಸುಭಾಸ ನಾಯಿಕ ಬಸವಣ್ಣಿ ಗಜಬರ್, ಬಸವಪ್ರಭು ವಂಟಮೂರಿ, ರಮೇಶ್ ಬೋಳೆಗಾಂವ, ಚನ್ನಪ್ಪ ಗಜಬರ್, ಪಿಂಟು ಶೆಟ್ಟಿ, ಅಣ್ಣು ಶೆಟ್ಟಿ, ಆನಂದ ಲಕ್ಕುಂಡಿ, ಸಂಪತ್ ಕುಮಾರ ಶಾಸ್ತ್ರೀಜಿ, ಸುರೇಶ್ ಜಿನರಾಳ, ಸಿ.ಎಂ.ದರಬಾರೆ, ಚನ್ನಪ್ಪ ಗಜಬರ್, ಸುರೇಶ್ ಜಿನರಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.