ADVERTISEMENT

ಬೆಳಗಾವಿ: ನಾಡಗೀತೆ ಹಾಡಿ ಕನ್ನಡ ಪ್ರೇಮ ಮೆರೆದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 11:05 IST
Last Updated 6 ಸೆಪ್ಟೆಂಬರ್ 2018, 11:05 IST
ಆಶಾ ಐಹೊಳೆ
ಆಶಾ ಐಹೊಳೆ   

ಬೆಳಗಾವಿ: ಇಲ್ಲಿನ ಜಿಲ್ಲಾ ಪಂಚಾಯ್ತಿಯಲ್ಲಿ ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಅಧ್ಯಕ್ಷೆ ಆಶಾ ಐಹೊಳೆ ಸ್ವತಃ ನಾಡಗೀತೆ ಹಾಡುವ ಮೂಲಕ ಕನ್ನಡ ಪ್ರೇಮ ಮೆರೆದರು. ಅವರೊಂದಿಗೆ ಕೆಲವು ಅಧಿಕಾರಿಗಳು ಹಾಗೂ ಸದಸ್ಯರು ದನಿಗೂಡಿಸಿದರು.

ಜಿಲ್ಲಾ ಪಂಚಾಯ್ತಿಗಳಲ್ಲಿ ಸಭೆಗಳ ಆರಂಭಕ್ಕೆ ಮುನ್ನ, ಮುದ್ರಿತ ನಾಡಗೀತೆಯನ್ನು ಹಾಕುವುದು ಸಾಮಾನ್ಯ. ಆದರೆ, ಗಡಿನಾಡು ಬೆಳಗಾವಿಯಲ್ಲಿ ಅಧ್ಯಕ್ಷರೇ ಹಾಡುವ ಮೂಲಕ ಹೊಸದೊಂದು, ಮಾದರಿ ಸಂಪ್ರದಾಯ ಆರಂಭಿಸಿದ್ದಾರೆ.

‘ಮುದ್ರಿತ ನಾಡಗೀತೆ ಬದಲಿಗೆ ಅಧಿಕಾರಿಗಳು ಹಾಗೂ ಸದಸ್ಯರೇ ನಾಡಗೀತೆ ಹಾಡಬೇಕು ಎನ್ನುವುದು ನನ್ನ ಬಯಕೆ. ಇದರಿಂದ ಗಡಿಯಲ್ಲಿ ಕನ್ನಡ ಪ್ರೇಮ ಬೆಳೆಯುತ್ತದೆ. ಮರಾಠಿ ಭಾಷಿಕರು ಕೂಡ ಕಲಿತಂತಾಗುತ್ತದೆ. ಅಧಿಕಾರಿಗಳು ಬಾಯಿಪಾಠ ಮಾಡಿಕೊಂಡು ಬರಬೇಕು’ ಎಂದು ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಅವರು ಗಮನಸೆಳೆದಿದ್ದರು. ಈಗ, ಅಧಿಕಾರಿಗಳು ಹಾಡಲಿ ಬಿಡಲಿ, ತಾವು ಹಾಡುತ್ತಿದ್ದಾರೆ.

ADVERTISEMENT

ಮಹಾರಾಷ್ಟ್ರದವರಾದ ಅವರು ಕನ್ನಡ ಕಲಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.