ಮುನವಳ್ಳಿಯಲ್ಲಿ ನಡೆದ ನಾಡಹಬ್ಬದ ರಜತ ಮಹೋತ್ಸವವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು
ಮುನವಳ್ಳಿ: ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಾಡಹಬ್ಬದ ರಜತ ಮಹೋತ್ಸವವನ್ನು ಶಾಸಕ ವಿಶ್ವಾಸ ವೈದ್ಯ ಶನಿವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ‘25 ವರ್ಷಗಳಿಂದ ನಡೆಯುತ್ತಿರುವ ಈ ನಾಡಹಬ್ಬದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರು ಭಾಗಿಯಾಗುತ್ತಿದ್ದಾರೆ. ಈ ನಾಡಹಬ್ಬವು 100 ವರ್ಷಗಳಕಾಲ ಯಶಸ್ವಿಯಾಗಿ ಸಾಗಲಿ ಇದಕ್ಕೆ ನಾನು ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತೆನೆ. ನನ್ನ ಸಹಾಯ, ಸಹಕಾರಿ ಸದಾ ಇರುತ್ತದೆ. ಈ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮದ ಹಾಗೆ ಎತ್ತರಕ್ಕೆ ಬೆಳೆಯಲಿ’ ಎಂದರು.
ಅಸಿಸ್ಟಂಟ್ ಕಮೀಷನರ್ ವೈ.ಎಸ್. ಸಿಂಗಣ್ಣವರ ಮಾತನಾಡಿ, ‘ಈ ನಾಡಹಬ್ಬದ ಸಮಿತಿಯಲ್ಲಿ ನಾನೂ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿ, ನಂತರ ಕೆ.ಎ.ಎಸ್. ಪಾಸಾಗಿ ಈ ಹುದ್ದೆಗೆ ಬಂದಿರುವೆ’ ಎಂದರು.
ಸಾನ್ನಿಧ್ಯ ವಹಿಸಿ ಮುರುಘೇಂದ್ರ ಶ್ರೀ ಮಾತನಾಡಿ, ‘ದುರ್ಗಾದೌಡ ಕಾರ್ಯಕ್ರಮ ಚಿಕ್ಕಮಕ್ಕಳು, ಯುವಕರು, ಹಿರಿಯರು ಸೇರಿ ದೌಡ್ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿರುವುದು ದೇವಿಗೆ ಸಲ್ಲಿಸುವ ಸೇವೆಯಾಗಿದೆ’ ಎಂದರು.
ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ರವಿಂದ್ರ ಯಲಿಗಾರ, ದಂಡಾಧಿಕಾರಿ ಮಲ್ಲಿಕಾರ್ಜುನ ಹೆಗ್ಗಣ್ಣವರ, ಅಧ್ಯಕ್ಷತೆಯನ್ನು ಸುರೇಶ ಜಾವೂರ, ಪ್ರಾಯೋಜಕ ವಹಿಸಿದ ವೀರೇಶ ಬ್ಯಾಹಟ್ಟಿ, ಎಂ.ಆರ್.ಗೋಪಶೆಟ್ಟಿ, ಸೋಮಶೇಖರ ಯಲಿಗಾರ, ವೀರಣ್ಣ ಕಮ್ಮಾರ, ಚಂದ್ರು ಶಾಮರಾಯನವರ, ಮಂಜು ಪಾಚಂಗಿ, ಚಂದ್ರು ಜಂಬ್ರಿ, ನಾಗರಾಜ ಗೋಪಶೆಟ್ಟಿ, ಹನಮಂತ ಶಿಂಗನ್ನವರ, ಕಾಶವ್ವ ಹಿರೇಮೇತ್ರಿ, ಮಿರಾಸಾಬ ವಟ್ನಾಳ, ಶ್ರೀಶೈಲ ನೇಗಿನಾಳ, ಪಂಚು ಬಾರಕೆರ, ಬಸವರಾಜ ದೊಡಮನಿ, ಸಮಿರವುಲ್ಲಾ ಚೂರಿಖಾನ, ಗಂಗಾದರ ಗೊರಾಬಾಳ, ಡಾ.ಸಂಕಪ್ಪ ಯಕ್ಕುಂಡಿ, ಆರ್.ಎಚ್.ಪಾಟೀಲ, ಗುರುರಾಜ ಇದ್ದರು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.