
ನಾಗರಮುನ್ನೋಳಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯ ಜ್ಞಾನವೂ ಅತ್ಯಗತ್ಯ’ ಎಂದು ಚಿಕ್ಕೋಡಿ ಡಯಟ್ ಉಪನ್ಯಾಸಕ ಮಲ್ಲಿಕಾರ್ಜುನ್ ಯರಗುದ್ರಿ ಹೇಳಿದರು.
ಸಮೀಪದ ಬೆಳಕೂಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಕಲಾತರಂಗಿಣಿ–2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈಗಿನ ಸರ್ಕಾರಿ ಶಾಲೆಗಳು ಎಲ್ಲ ಸೌಲಭ್ಯಗಳನ್ನು ಹೊಂದಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂದಾಗಿವೆ’ ಎಂದರು.
ಸಮನ್ವಯ ಅಧಿಕಾರಿ ಎಲ್ಲೇಶ್ ಕಾಮಣ್ಣವರ, ಬಸವರಾಜ್ ಕುಂಬಾರ, ಮಹಾಂತೇಶ್ ಚೌಹಾನ, ದಾನೇಶ್ವರಿ ಮಠಪತಿ, ಮಂಜುನಾಥ್ ಸಾವಂತ, ಸಿ.ಬಿ. ಅರಭಾವಿ, ನೇಮಿನಾಥ್ ಮುಂಜೋಳಿ, ಸಿದ್ದು ಮೆಟಗುಡ್ಡ, ರವೀಂದ್ರ ಹೆಬ್ಬಾಳ, ಮಹದೇವ್ ಚೌಗಲಾ, ಕಲ್ಲಯ್ಯ ಮಠಪತಿ, ರೇಖಾ ಮುಗುಳಿ, ರೇಖಾ ಸಣ್ಣಕ್ಕಿ, ಲಕ್ಷ್ಮಿ ಪರಾಳೆ, ಸುರೇಖಾ ಅರಭಾವಿ, ಕುಮಾರ ಹಾದಿಮನಿ, ತುಕಾರಾಂ ಮೆಟಗುಡ್ಡ, ಸಂಜು ಪರೀಟ, ಸಂಜು ನಾವಿ, ಮುಖ್ಯ ಶಿಕ್ಷಕ ಬಿ.ಸಿ. ನಿಲವಂಗಿಮಠ, ಸಿ.ಎಲ್. ಯಾದಗುಡೆ, ಜೆ.ಎಂ. ಚೌಗಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.