ADVERTISEMENT

ಹೊನಕುಪ್ಪಿಯಲ್ಲಿ ನವರಾತ್ರಿ ಉತ್ಸವ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 15:45 IST
Last Updated 5 ಅಕ್ಟೋಬರ್ 2022, 15:45 IST
ಕೌಜಲಗಿ ಸಮೀಪದ ಹೊನಕುಪ್ಪಿ ಗ್ರಾಮದಲ್ಲಿ ಬಬಲಾದಿ ಶ್ರೀಗಳನ್ನು ಸಕಲ ವಾದ್ಯ ಮೇಳಗಳೊಂದಿಗೆ ತೆರೆದ ವಾಹನದಲ್ಲಿ ಮೆರೆವಣಿಗೆಯೊಂದಿಗೆ ಗ್ರಾಮಸ್ಥರು ಸ್ವಾಗತಿಸಿದರು
ಕೌಜಲಗಿ ಸಮೀಪದ ಹೊನಕುಪ್ಪಿ ಗ್ರಾಮದಲ್ಲಿ ಬಬಲಾದಿ ಶ್ರೀಗಳನ್ನು ಸಕಲ ವಾದ್ಯ ಮೇಳಗಳೊಂದಿಗೆ ತೆರೆದ ವಾಹನದಲ್ಲಿ ಮೆರೆವಣಿಗೆಯೊಂದಿಗೆ ಗ್ರಾಮಸ್ಥರು ಸ್ವಾಗತಿಸಿದರು   

ಕೌಜಲಗಿ: ಹಸಿದು ಬಂದವರಿಗೆ ಅನ್ನ ಹಾಕಿ. ದುಡಿದವರಿಗೆ ದುಡ್ಡು ಕೊಡಿ ಅವರಲ್ಲಿ ದೇವರು ಇರುವನು. ದೇಶ ಕಾಯೋ ಸೈನಿಕ, ಅನ್ನ ಕೊಡುವ ರೈತ ಸಕಲರಿಗೂ ಎರಡು ಕಣ್ಣಿದ್ದಂತೆ ಅವರನ್ನು ಗೌರವಿಸಿ ಎಂದು ಬಬಲಾದಿ ಮಠದ ಸಿದ್ದರಾಮಯ್ಯ ಅಜ್ಜನವರು ಹೇಳಿದರು.

ಸಮೀಪದ ಹೊನಕುಪ್ಪಿ ಗ್ರಾಮದ ಚಂದ್ರಮ್ಮದೇವಿ ಕೈವಲ್ಯ ಮಠದಲ್ಲಿ ಮಂಗಳವಾರ ಜರುಗಿದ ನವರಾತ್ರಿ ಉತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ವಚನ, ದೇಶಭಕ್ತಿ ಸಾರುವ ಪುಸ್ತಕ ಕೊಡುವುದನ್ನು ಪಾಲಕರು ಕಲಿಸಬೇಕಾಗಿದೆ. ಬಬಲಾದಿ ಶ್ರೀಮಠ ಅಂದು ತೀರ್ಥ ಮಠವಾಗಿತ್ತು. ಇಂದು ಮಾತೆಯರಿಂದ ಅಂಬಲಿ ಮಠವಾಗಿದೆ ಎಂದರು.

ಮೆರವಣಿಗೆಯು ಗ್ರಾಮದ ಕನಕದಾಸರ ವೃತ್ತದಿಂದ ಸುಮಂಗಲೆಯರ ಆರತಿ, ಸಕಲ ವಾದ್ಯ ಮೇಳಗಳೊಂದಿಗೆ, ಬಬಲಾದಿ ಶ್ರೀಗಳನ್ನು ಚಂದ್ರಮ್ಮದೇವಿ ಮಠಕ್ಕೆ ಬರಮಾಡಿಕೊಳ್ಳಲಾಯಿತು.

ADVERTISEMENT

ಬೆಕ್ಕೇರಿಯ ವೇದಮೂರ್ತಿ ಶಿವಾಯನಮಂ ಶಾಸ್ತ್ರಿ, ಹೊನಕುಪ್ಪಿ ಚಂದ್ರಮ್ಮದೇವಿ ಕೈವಲ್ಯ ಮಠದ ಶರಣ ಬಸಪ್ಪ ಅಜ್ಜನವರು, ಸಿದ್ದಪ್ಪ ಹೆಗಡೆ, ಸುರೇಶ ಹೆಗಡೆ, ಸುರೇಶ ಹಾರೂಗೇರಿ, ಬೀರಪ್ಪ ಹುಲಗನಗನವರ, ಲಕ್ಕಪ್ಪ ಬೆಳಗಲಿ, ಸಿದ್ರಾಯಪ್ಪ ಬೆಳಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.