ADVERTISEMENT

ಯಲ್ಲಮ್ಮನಗುಡ್ಡ: ನವರಾತ್ರಿ ಉತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:03 IST
Last Updated 23 ಸೆಪ್ಟೆಂಬರ್ 2025, 6:03 IST
ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಅಶ್ವತ್ಥ ವೈದ್ಯ  ದೀಪಕ್ಕೆ ಎಣ್ಣೆ ಹಾಕಿ, ನವರಾತ್ರಿ ಉತ್ಸವಕ್ಕೆ ಚಾಲನೆ ಕೊಟ್ಟರು
ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಅಶ್ವತ್ಥ ವೈದ್ಯ  ದೀಪಕ್ಕೆ ಎಣ್ಣೆ ಹಾಕಿ, ನವರಾತ್ರಿ ಉತ್ಸವಕ್ಕೆ ಚಾಲನೆ ಕೊಟ್ಟರು   

ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಒಂಭತ್ತು ದಿನ ವೈಭವದಿಂದ ನೆರವೇರಲಿರುವ ನವರಾತ್ರಿ ಉತ್ಸವಕ್ಕೆ ಕಾಂಗ್ರೆಸ್‌ ಮುಖಂಡ ಅಶ್ವತ್ಥ ವೈದ್ಯ ಸೋಮವಾರ ಚಾಲನೆ ನೀಡಿದರು.

ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ, ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ, ಆಶಾತಾಯಿ ಕೋರೆ, ಡಾ.ಪ್ರೀತಿ ದೊಡ್ಡವಾಡ, ಸಿಪಿಐ ಧರ್ಮಾಕರ ಧರ್ಮಟ್ಟಿ, ಪಿಎಸ್‍ಐ ಕಲ್ಮೇಶ ಬನ್ನೂರ, ಸಿದ್ದನಗೌಡ ಗೂಡ್ರಾಶಿ, ನಾಗರತ್ನಾ ಚೋಳಿನ, ರೇಣುಕಾ ಶಿಂತ್ರಿ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್.ಸವದತ್ತಿ ಇತರರಿದ್ದರು.

ನವರಾತ್ರಿ ಮೊದಲ ದಿನವೇ ದೇಶದ ವಿವಿಧ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ, ದೇವಿ ದರ್ಶನ ಪಡೆದರು. ಯಲ್ಲಮ್ಮ ದೇವಸ್ಥಾನದಲ್ಲಿ ಅಳವಡಿಸಿದ್ದ ದೀಪಕ್ಕೆ ಎಣ್ಣೆ ಹಾಕಿ ಭಕ್ತಿ ಸಮರ್ಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.