ಸವದತ್ತಿ: ಖಾನಾಪೂರ ಕಣಕುಂಬಿ ಘಟ್ಟ ಪ್ರದೇಶದಲ್ಲಿ ಸುರಿದ ಸಮೃದ್ಧ ಮಳೆಗೆ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ನಾಲ್ಕು ಜಿಲ್ಲೆಯ ಹದಿಮೂರು ತಾಲ್ಲೂಕಿನ ಜನರ ಜೀವನಾಡಿಯಾದ ಮಲಪ್ರಭೆಯ ನವಿಲುತೀರ್ಥ (ಇಂದಿರಾ ಗಾಂಧಿ) ಅಣೆಕಟ್ಟು ಗುರುವಾರ 11ನೇ ಬಾರಿ ಸಂಪೂರ್ಣ ಭರ್ತಿಯಾಗಿದೆ.
ಗುರುವಾರ ಇದ್ದ 4904 ಕ್ಯೂಸೆಕ್ ಒಳಹರಿವನ್ನು ಭರ್ತಿಯಾದ ಆಣೆಕಟ್ಟಿನ ಸುರಕ್ಷತೆಗಾಗಿ ಪೂರ್ಣಪ್ರಮಾಣದಲ್ಲಿ ಹರಿಬಿಡಲಾಗಿದ್ದು, ಇದರಲ್ಲಿ ಕ್ರಸ್ಟ್‌ಗೇಟ್‌ನಿಂದ 3500 ಕ್ಯೂಸೆಕ್, ಬಲದಂಡೆ ಕಾಲುವೆಗೆ 200 ಕ್ಯೂಸೆಕ್, ನರಗುಂದ ಶಾಖಾ ಕಾಲುವೆಗೆ 200 ಕ್ಯೂಸೆಕ್ ಹಾಗೂ ಕುಡಿಯುವ ನೀರಿಗಾಗಿ 194 ಕ್ಯೂಸೆಕ್ ಹರಿಸಲಾಗಿದೆ. ಮಳೆ ಪ್ರಮಾಣದಲ್ಲಿ ಏರಿಕೆ ಕಂಡಲ್ಲಿ ನದಿ ಒಳ ಹರಿವು ಹೆಚ್ಚಾಗಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಕಾರಣ ನದಿ ಪಾತ್ರದ ಜನತೆಗೆ ಎಚ್ಚರಿಕೆಯಿಂದರಲೂ ಸೂಚಿಸಲಾಗಿದೆ.
’ತಾಲೂಕಿನಾದ್ಯಂತ ಜೂನ್ 1ರಿಂದ ಇಲ್ಲಿಯವರೆಗೂ 220.4 ಮಿ.ಮೀ.ಮಳೆ ಸುರಿಯಬೇಕಿತ್ತು. ಶೇ. 72 ಹೆಚ್ಚು ಮಳೆ ಸುರಿದಿದೆ. ಸಮೃದ್ಧ ಮಳೆಯಾಗಿ ಆಣೆಕಟ್ಟು ಭರ್ತಿಯಾಗಿದ್ದು ಎಲ್ಲರಿಗೂ ಹರ್ಷತಂದಿದೆ. ಶೀಘ್ರದಲ್ಲಿ ಬಾಗಿನ ಅರ್ಪಿಸಲಾಗುವುದು’ ಎಂದು ಶಾಸಕ ವಿಶ್ವಾಸ್ ವೈದ್ಯ ತಿಳಿಸಿದರು.
’ರಾಮದುರ್ಗ, ನರಗುಂದ ಜಲಾನಯನ ಕ್ಷೇತ್ರದ ಹಲವೆಡೆ ಅತೀಕ್ರಮಣವಾಗಿದೆ. ಇದು ತೆರವಾದರೆ ನದಿ ನೀರು ಹರಿವು ಹೆಚ್ಚಿದ್ದರೂ ಸರಾಗವಾಗಿ ಹರಿಯಬಹುದು. ಆದರೆ, ಅತೀಕ್ರಮಣದಿಂದ ನೀರು ನದಿ ದಡದ ಗ್ರಾಮಗಳಿಗೆ ನುಗ್ಗಿ ಹಾನಿಗೊಳಿಸುತ್ತಿದೆ. ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ತೆರವು ಕಾರ್ಯ ನಡೆಸಿ ಹಾನಿ ತಪ್ಪಿಸಬಹುದು’ ಎಂದು ನವಿಲುತೀರ್ಥ ಡ್ಯಾಮ್ ಎಇಇ ವಿವೇಕ ಮುದಿಗೌಡರ ತಿಳಿಸಿದರು.
ರಾಮದುರ್ಗ ನರಗುಂದ ಜಲಾನಯನ ಕ್ಷೇತ್ರದ ಹಲವೆಡೆ ಅತೀಕ್ರಮಣವಾಗಿದೆ. ಇದು ತೆರವಾದರೆ ನದಿ ನೀರು ಹರಿವು ಹೆಚ್ಚಿದ್ದರೂ ಸರಾಗವಾಗಿ ಹರಿಯಬಹುದು. ಆದರೆ ಅತೀಕ್ರಮಣದಿಂದ ನೀರು ನದಿ ದಡದ ಗ್ರಾಮಗಳಿಗೆ ನುಗ್ಗಿ ಹಾನಿಗೊಳಿಸುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತೆರವು ಕಾರ್ಯ ನಡೆಸಿ ಹಾನಿ ತಪ್ಪಿಸಬಹುದು.ವಿವೇಕ ಮುದಿಗೌಡರ ಎಇಇ ನವಿಲುತೀರ್ಥ ಡ್ಯಾಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.