ADVERTISEMENT

ಮೇಕಲಮರಡಿ ಗ್ರಾ.ಪಂ.: ರಾಜು ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 14:06 IST
Last Updated 29 ಜನವರಿ 2022, 14:06 IST
ನೇಸರಗಿ ಸಮೀಪದ ಮೇಕಲಮರಡಿ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಹಣ್ಣಿಕೇರಿ ಅವರನ್ನು ಸದಸ್ಯರು ಮತ್ತು ಗ್ರಾಮಸ್ಥರು ಸನ್ಮಾನಿಸಿದರು
ನೇಸರಗಿ ಸಮೀಪದ ಮೇಕಲಮರಡಿ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಹಣ್ಣಿಕೇರಿ ಅವರನ್ನು ಸದಸ್ಯರು ಮತ್ತು ಗ್ರಾಮಸ್ಥರು ಸನ್ಮಾನಿಸಿದರು   

ನೇಸರಗಿ: ಸಮೀಪದ ಮೇಕಲಮರಡಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ರಾಜು ಹಣ್ಣಿಕೇರಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾ ಅಧಿಕಾರಿ ಎಸ್.ಕೆ. ಮುಕಸಜ್ಜಿ ಹಾಗೂ ಪಿಡಿಒ ಎಸ್.ಎಚ್‌. ಆನಿಗೋಳ, ಗ್ರಾಮ ಪಂಚಾಯ್ತಿ ಸದಸ್ಯರ ಉಪಸ್ಥಿತಿಯಲ್ಲಿ ಪ್ರಕ್ರಿಯೆ ನಡೆಯಿತು. ನಿಕಟಪೂರ್ವ ಅಧ್ಯಕ್ಷ ಚಂದ್ರಯ್ಯ ಹಿರೇಮಠ ಅಧಿಕಾರ ಹಸ್ತಾಂತರಿಸಿದರು.

ಸದಸ್ಯರಾದ ಚಂದ್ರಯ್ಯ ಹಿರೇಮಠ, ಭಾರತಿ ತಿಗಡಿ, ವಿಜಯ ಯರಡಾಲ, ಕಾಶಿಮ ಜಮಾದಾರ, ಯಲ್ಲವ್ವ ಗುಡಿ, ರೇಣುಕಾ ಕಡಕೋಳ, ಗ್ರಾಮಸ್ಥರಾದ ಮಹಾಂತೇಶ ಹಣ್ಣಿಕೇರಿ, ಮಹಾಂತೇಶ ಪಾಟೀಲ, ವೀರಭದ್ರಯ್ಯ ಹಿರೇಮಠ, ಈರಯ್ಯ ಹಿರೇಮಠ, ರಾಜು ಕಡಕೋಳ, ಶಿವಾನಂದ ಅರಕೇರಿ, ರವಿ ಹುಲಮನಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.