ADVERTISEMENT

ಕ್ಯಾಂಪಸ್‌ ಸಂದರ್ಶನ: VSMನ 153 ವಿದ್ಯಾರ್ಥಿಗಳ ಸಹಿತ 742 ವಿದ್ಯಾರ್ಥಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:45 IST
Last Updated 18 ಫೆಬ್ರುವರಿ 2026, 7:45 IST
ನಿಪ್ಪಾಣಿಯಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ , ಪಪ್ಪು ಪಾಟೀಲ, ಸಮೀರ ಬಾಗೇವಾಡಿ ಮತ್ತು ಸಂಚಾಲಕರು ಅಭಿನಂದಿಸಿದರು
ನಿಪ್ಪಾಣಿಯಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ , ಪಪ್ಪು ಪಾಟೀಲ, ಸಮೀರ ಬಾಗೇವಾಡಿ ಮತ್ತು ಸಂಚಾಲಕರು ಅಭಿನಂದಿಸಿದರು   

ನಿಪ್ಪಾಣಿ: 'ಸ್ಥಳೀಯ ವಿಎಸ್‌ಎಂ ಬಿಬಿಎ, ಬಿಸಿಎ, ಪದವಿ ಮಹಾವಿದ್ಯಾಲಯಗಳು, ವಿಎಸ್‌ಎಂ ಸೋಮಶೇಖರ ಆರ್‌. ಕೋಠಿವಾಲೆ ಪಾಲಿಟೆಕ್ನಿಕ್‌ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪೆನಿಯ ಸಂಯುಕ್ತಾಶ್ರಯದಲ್ಲಿ ಈಚೆಗೆ ವಿಎಸ್‌ಎಂಎಸ್‌ಆರ್‌ಕೆಐಟಿಯ ಎಂಬಿಎ-ಎಂಸಿಎ ವಿಭಾಗದಲ್ಲಿ ಜರುಗಿದ ಕ್ಯಾಂಪಸ್‌ ಸಂದರ್ಶನದಲ್ಲಿ ವಿಎಸ್‌ಎಂನ 153 ಅಭ್ಯರ್ಥಿಗಳ ಸಹಿತ ಒಟ್ಟು 742 ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ. ಇವರಲ್ಲಿ 489 ಮಹಿಳಾ ಅಭ್ಯರ್ಥಿಗಳು ಹಾಗೂ 253 ಪುರುಷ ಅಭ್ಯರ್ಥಿಗಳು ಸೇರಿದ್ದಾರೆʼ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 'ಕ್ಯಾಂಪಸ್‌ ಸಂದರ್ಶನದಲ್ಲಿ ನಗರ ಸೇರಿದಂತೆ ಚಿಕ್ಕೋಡಿ, ಗೋಕಾಕ, ಅಥಣಿ, ರಾಯಬಾಗ, ಹುಕ್ಕೇರಿ, ಸಂಕೇಶ್ವರ, ಕಾಗವಾಡ, ಶಿರಗುಪ್ಪಿ, ಗಡಹಿಂಗ್ಲಜ್‌ ಮೊದಲಾದ ಪಟ್ಟಣಗಳ ಸಹಿತ ಬೆಳಗಾವಿ ಜಿಲ್ಲೆಯ ಹಾಗೂ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ವಿವಿಧೆಡೆಯಿಂದ 1,180 ಅಭ್ಯರ್ಥಿಗಳು ಭಾಗವಹಿಸಿದ್ದರು’ ಎಂದು ಹೇಳಿದರು.

ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಮಾತನಾಡಿ 'ಪ್ರಖ್ಯಾತ ಕಂಪೆನಿಗಳನ್ನು ಸಂಸ್ಥೆಯಲ್ಲಿಯೇ ಕರೆಯಿಸಿ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ನೀಡಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗದ ಬಹಳಷ್ಟು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವಾಗುತ್ತಿದೆ' ಎಂದರು.

ADVERTISEMENT

ಸಿಇಓ ಸಿದ್ದಗೌಡ ಪಾಟೀಲ ಮಾತನಾಡಿ 'ಮಂಡಳದಿಂದ ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಲಾಗುತ್ತಿದೆ' ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಆನಂದ ಗಿಂಡೆ, ಸಚಿನ ಹಾಲಪ್ಪನವರ, ಅವಿನಾಶ ಪಾಟೀಲ, ಪ್ರವೀನ ಪಾಟೀಲ, ರುದ್ರಕುಮಾರ ಕೋಠಿವಾಲೆ, ಪ್ರಾಚಾರ್ಯ ಬಸವರಾಜ ಕರೋಶಿ, ಚಿದಂಬರ ಜೋಶಿ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.