ನಿಪ್ಪಾಣಿ: ತಾಲ್ಲೂಕಿನ ಆಡಿಯಲ್ಲಿಯ ದತ್ತದೇವಸ್ಥಾನ ಮಠದ ವತಿಯಿಂದ ಎರಡು ದಿನಗಳಿಂದ ಆಯೋಜಿಸಿದ್ದ ದತ್ತ ಯಾಗ ರೂಪ ಮಹಾಯಜ್ಞವು ಪೂರ್ಣಾಹುತಿ ಮತ್ತು ಮಹಾ ಆರತಿಯೊಂದಿಗೆ ಬುಧವಾರ ಸಂಜೆ ಸಂಪನ್ನಗೊಂಡಿತು.
ದತ್ತಾತ್ರೇಯ ಮಠದ ಪರಮಾತ್ಮರಾಜ ಮಹಾರಾಜರು ಮಾತನಾಡಿ, ‘ಭಕ್ತರ ಮನಸ್ಸಿನಲ್ಲಿನ ದೃಢ ನಂಬಿಕೆಯೇ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಿಗೆ ಆಧಾರವಾಗಿದೆ’ ಎಂದರು.
ಸಂಜೀವನಗಿರಿಯ ತಳದಲ್ಲಿ ‘ಸುಪ್ರಾದ್ಯ ವಲ್ಭಾಲಯ’ದ ಪ್ರಾಂಗಣದಲ್ಲಿ ಭವ್ಯ ಮಂಟಪವನ್ನು ನಿರ್ಮಿಸಿ ಅನೇಕ ಯಜ್ಞಕುಂಡಗಳನ್ನು ನಿರ್ಮಿಸಲಾಗಿತ್ತು. ಮೊದಲ ದಿನ ಪರಮಾತ್ಮರಾಜ ಮಹಾರಾಜ, ದೇವಿದಾಸ ಮಹಾರಾಜ ಮತ್ತು ಆಶ್ರಮ ಸಾಧಕರಿಂದ ದತ್ತಗುರು, ಬ್ರಹ್ಮ, ವಿಷ್ಣು, ಮಹೇಶ ಹಾಗೂ 64 ಯೋಗಿನಿಯರ ಮೂರ್ತಿಗಳು, 16 ಮಾತೃಕಾದೇವಿ, ನವಗ್ರಹ ದೇವತೆ ಮುಂತಾದವವರ ಪ್ರತಿಷ್ಠಾಪನೆ ಕಾರ್ಯ ನೆರವೇರಿತು.
ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ಸುಭಾಷ ಜೋಶಿ, ರಾಹುಲ ಜಾರಕಿಹೊಳಿ, ಉತ್ತಮ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ವಿಎಸ್‍ಎಂ ಚೇರಮನ್ ಚಂದ್ರಕಾಂತ ಕೋಠಿವಾಲೆ, ಮಹಾದೇವ ವಾಲಿ, ಈರೆಸ್ವಾಮಿ ಇಟಗೋಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.