ADVERTISEMENT

ನಿಪ್ಪಾಣಿ | ₹25 ಸಾವಿರದ ಮಾದಕ ವಸ್ತು ವಶ: 6 ಜನರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 4:26 IST
Last Updated 30 ಜನವರಿ 2026, 4:26 IST
   

ನಿಪ್ಪಾಣಿ: ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಹಾಗೂ ಮಾರಾಟದ ಎರಡು ಬೇರೆಬೇರೆ ಪ್ರಕರಣದಲ್ಲಿ ಒಟ್ಟು 6 ಜನರ ವಿರುದ್ಧ ಸ್ಥಳೀಯ ಶಹರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ.

ನಗರದ ಯರನಾಳ ರಸ್ತೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕರವೀರ ತಾಲ್ಲೂಕಿನ ಉಜಳಾಯಿವಾಡಿ ಗ್ರಾಮದ ರಮೇಶ ಪರೀಟ, ಗಾಂಜಾ ಖರೀದಿಸಿದ ಸ್ಥಳೀಯ ಬುದ್ಧನಗರದ ಉಮೇಶ ಕೃಷ್ಣಾ ಕದಮ(27), ಸ್ಥಳೀಯ ಶಿವಾಜಿನಗರದ ಅರ್ಜುನ ಪುಂಡಲಿಕ ಮೋಡಿಕರ(40), ಶುಭಂ ಶಾಮ ಹೆಗಡೆ(25), ಯರನಾಳ ರಸ್ತೆಯ ಅಭಿಜೀತ ರಾಜು ಪರಮಾರ(27) ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರಿಂದ ಸುಮಾರು ₹25 ಸಾವಿರ ಮೌಲ್ಯದ 525 ಗ್ರಾಂ ಗಾಂಜಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸ್ಥಳೀಯ ಸ್ಮಶಾನಭೂಮಿ ಮಾರುತಿ ಮಂದಿರದ ಹತ್ತಿರವಿರುವ ಹಳ್ಳದ ಪಕ್ಕದಲ್ಲಿ ಗಾಂಜಾ ಸೇವನೆ ಮಾಡಿದ ಬುದ್ಧನಗರದ ಪ್ರವೀಣ ಅಶೋಕ ಚೌಗುಲೆ(20) ಎಂಬಾತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅದು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ವಿರುದ್ಧ ಸ್ಥಳೀಯ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.