ADVERTISEMENT

ನಿಪ್ಪಾಣಿ | ವಿಎಸ್‍ಎಂಎಸ್‍ಆರ್‌ಕೆಐಟಿಗೆ ಎಲ್ಲ ಸಹಕಾರ: ಉಪಕುಲಪತಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:05 IST
Last Updated 13 ಸೆಪ್ಟೆಂಬರ್ 2025, 6:05 IST
ಉಪಕುಲಪತಿ ಹುದ್ದೆಯ ಅವಧಿ ವಿಸ್ತರಣೆಯಾದ ಹಿನ್ನೆಲೆಯಲ್ಲಿ ವಿಟಿಯೂ ಉಪಕುಲಪತಿ ಡಾ. ಎಸ್. ವಿದ್ಯಾಶಂಕರ ಅವರನ್ನು ವಿಎಸ್‍ಎಂ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅಭಿನಂದಿಸಿದರು. ಸಂಜಯ ಮೊಳವಾಡೆ, ಎಂಜಿನೀಯರ್ ಸುನೀಲ ಪಾಟೀಲ, ಸಮೀರ ಬಾಗೇವಾಡಿ, ಪಪ್ಪು ಪಾಟೀಲ, ಡಾ.ಉಮೇಶ ಪಾಟೀಲ ಇದ್ದಾರೆ
ಉಪಕುಲಪತಿ ಹುದ್ದೆಯ ಅವಧಿ ವಿಸ್ತರಣೆಯಾದ ಹಿನ್ನೆಲೆಯಲ್ಲಿ ವಿಟಿಯೂ ಉಪಕುಲಪತಿ ಡಾ. ಎಸ್. ವಿದ್ಯಾಶಂಕರ ಅವರನ್ನು ವಿಎಸ್‍ಎಂ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅಭಿನಂದಿಸಿದರು. ಸಂಜಯ ಮೊಳವಾಡೆ, ಎಂಜಿನೀಯರ್ ಸುನೀಲ ಪಾಟೀಲ, ಸಮೀರ ಬಾಗೇವಾಡಿ, ಪಪ್ಪು ಪಾಟೀಲ, ಡಾ.ಉಮೇಶ ಪಾಟೀಲ ಇದ್ದಾರೆ   

ನಿಪ್ಪಾಣಿ: ‘ಗಡಿಭಾಗದಲ್ಲಿ ತಾಂತ್ರಿಕ ಮಹಾವಿದ್ಯಾಲಯ ಹುಟ್ಟುಹಾಕುವ ಮೂಲಕ ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಚೆಲ್ಲುತ್ತಿರುವ ಹಾಗೂ ತಾಂತ್ರಿಕತೆಯಲ್ಲಿ ವಿವಿಧ ಕ್ರಾಂತಿ ಮಾಡುತ್ತಿರುವ ವಿಎಸ್‍ಎಂಎಸ್‍ಆರ್‌ಕೆಐಟಿ ಮಹಾವಿದ್ಯಾಲಯಕ್ಕೆ ವಿಶ್ವವಿದ್ಯಾಲಯದಿಂದ ಅಗತ್ಯ ಎಲ್ಲ ಸಹಕಾರ ನೀಡಲಾಗುವುದು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ ಉಪಕುಲಪತಿ ಡಾ. ಎಸ್. ವಿದ್ಯಾಶಂಕರ ಹೇಳಿದರು.

ವಿಶ್ವವಿದ್ಯಾಲಯದ ಉಪಕುಲತಿ ಹುದ್ದೆಯ ಅವಧಿ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳ(ವಿಎಸ್‍ಎಂ)ದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ನೇತ್ವತ್ವದಲ್ಲಿ ಸದಸ್ಯರು, ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್‍ಎಂಎಸ್‍ಆರ್‌ಕೆಐಟಿ)ದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಶುಕ್ರವಾರ ವಿಟಿಯೂಗೆ ತೆರಳಿ ಅವರನ್ನು ಅಭಿನಂದಿಸಿದ ಸಂದರ್ಭದಲ್ಲಿ ಮಾತನಾಡಿದರು. ‘ವಿಟಿಯೂನ ಸಂಶೋಧನಾ ಉಪಕ್ರಮಗಳು ಹಾಗೂ ಉದ್ಯಮ, ಶೈಕ್ಷಣಿಕ ಪಾಲುದಾರಿಕೆಗಳ ವಿಎಸ್‍ಎಂಎಸ್‍ಆರ್‌ಕೆಐಟಿ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು’ ಎಂದರು.

ವಿಟಿಯೂದ ಎಲ್ಲ ಅತ್ಯಾಧುನಿಕ, ಸುಸಜ್ಜಿತ ಪ್ರಯೋಗಾಲಯಗಳು, ಇನ್‍ಕ್ಯುಬೇಶನ್ ಸೇರಿದಂತೆ ವಿವಿಧ ಕೇಂದ್ರಗಳನ್ನು ವೀಕ್ಷಿಸಲು ಉಪಕುಲಸಚಿವರು ಅನುವು ಮಾಡಿಕೊಟ್ಟರು.

ADVERTISEMENT

ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಉಪಾಧ್ಯಕ್ಷ ಎಂಜಿನೀಯರ್ ಸುನೀಲ ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಸಂಜಯ ಮೊಳವಾಡೆ, ಪ್ರಾಚಾರ್ಯ ಡಾ. ಉಮೇಶ ಪಾಟೀಲ, ಪ್ರೊ. ಗಿರೀಷ ಅಥಣಿಕರ, ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.