ADVERTISEMENT

ಬೆಳಗಾವಿ: ಸ್ಟ್ರೆಚ್ಚರ್‌ನಲ್ಲಿ ಕರೆದೊಯ್ಯುವ ಬದಲಿಗೆ ಎತ್ತಿಕೊಂಡೇ ಸಾಗಿಸಿದರು!

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 8:30 IST
Last Updated 30 ಜೂನ್ 2020, 8:30 IST
ಸ್ಟ್ರೆಚ್ಚರ್ ಇಲ್ಲದೆ ಅನಾರೋಗ್ಯ ಪೀಡಿತ ಬಾಲಕನನ್ನು ಎತ್ತಿಕೊಂಡು ಸಾಗುತ್ತಿರುವುದು
ಸ್ಟ್ರೆಚ್ಚರ್ ಇಲ್ಲದೆ ಅನಾರೋಗ್ಯ ಪೀಡಿತ ಬಾಲಕನನ್ನು ಎತ್ತಿಕೊಂಡು ಸಾಗುತ್ತಿರುವುದು   

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಗ್ಲೂಕೋಸ್ ಬಾಟಲಿ ಹಾಕಿದ್ದ ಬಾಲಕನನ್ನು ಕಂಕುಳಲ್ಲಿ ಎತ್ತಿಕೊಂಡು ಸಾಗಿಸಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಕುಟುಂಬದವರು ಎಮರ್ಜೆನ್ಸಿ ವಾರ್ಡ್‌ನಿಂದ ಮಕ್ಕಳ ವಾರ್ಡ್‌ವರೆಗೆ ಅಂದರೆ ಸುಮಾರು 500 ಮೀಟರ್‌ವರೆಗೆ ಎತ್ತಿಕೊಂಡೇ ಸಾಗಿಸಿದ್ದಾರೆ. ವ್ಯಕ್ತಿಯೊಬ್ಬರು ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್ ಕೊರತೆ ಇದೆಯೇ ಎನ್ನುವ ಅನುಮಾನವೂ ವ್ಯಕ್ತವಾಗುತ್ತಿದೆ.ಪ್ರತಿಕ್ರಿಯೆಗೆ ಬಿಮ್ಸ್ ನಿರ್ದೇಶಕರು ಲಭ್ಯವಾಗಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.