
ಬೆಳಗಾವಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ 51 ದಿನಗಳಿಂದ ಕೂಲಿ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಅವರು ಪರದಾಡುವಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 82 ಲಕ್ಷ ಮಾನವ ದಿನಗಳ ಸೃಜನೆಗೆ ಸರ್ಕಾರ ಗುರಿ ನೀಡಿತ್ತು. ಈ ಪೈಕಿ 2026ರ ಜ.14ರವರೆಗೆ 65.12 ಲಕ್ಷ (ಶೇ 79.42) ಮಾನವ ದಿನ ಸೃಷ್ಟಿಸಿ, ರಷ್ಟು ಗುರಿ ಸಾಧಿಸಲಾಗಿದೆ.
ಗುರಿ ಸಾಧನೆಗೆ ಇನ್ನೂ ಎರಡೂವರೆ ತಿಂಗಳ ಸಮಯವಿದ್ದು, ಶೇ 100ರಷ್ಟು ಗುರಿ ಸಾಧಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಯೋಜನೆಯಡಿ ವಿವಿಧ ಕಾಮಗಾರಿಗಳೂ ಭರದಿಂದ ಸಾಗಿವೆ. ಆದರೆ, ಸಕಾಲಕ್ಕೆ ಕೂಲಿ ಕೈಸೇರದಿರುವುದು ಕಾರ್ಮಿಕರಿಗೆ ಸಂಕಷ್ಟ ತಂದೊಡ್ಡಿದೆ.
ಪ್ರತಿ ಮಾನವ ದಿನ ಸೃಜನೆಗೆ ₹3709 ಕೂಲಿ ನೀಡಲಾಗುತ್ತಿದೆ. ಜಿಲ್ಲೆಯ ಕೆಲ ತಾಲ್ಲೂಕುಗಳ ಕಾರ್ಮಿಕರಿಗೆ ಡಿಸೆಂಬರ್ ಅಂತ್ಯದವರೆಗಿನ ಕೂಲಿ ಮೊತ್ತ ಪಾವತಿಯಾಗಿದೆ. ಕೆಲವು ತಾಲ್ಲೂಕಿನವರಿಗೆ 2025ರ ನವೆಂಬರ್ 25ರಿಂದ ಈವರೆಗಿನ ಕೂಲಿ ಮೊತ್ತ(₹9.34 ಕೋಟಿ) ಪಾವತಿಯಾಗಬೇಕಿದೆ.
ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಹಂತ–ಹಂತವಾಗಿ ಕೂಲಿ ಮೊತ್ತ ಪಾವತಿಯಾಗುತ್ತಿದೆರಾಹುಲ್ ಶಿಂಧೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ
ಜಿಲ್ಲೆಯ ಕೆಲ ತಾಲ್ಲೂಕುಗಳ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಮೊತ್ತ ಸಿಗುತ್ತಿದೆ. ಇನ್ನೂ ಕೆಲವರಿಗೆ ವಿಳಂಬವಾಗಿ ಕಾರ್ಮಿಕರು ಪರದಾಡುವ ಸ್ಥಿತಿ ಬಂದಿದೆಯಲ್ಲಪ್ಪ ಕೋಲಕಾರ ಗ್ರಾಮೀಣ ಕೂಲಿಕಾರರ ಸಂಘಟನೆ ಮುಖಂಡ
ಸಾಮಗ್ರಿ ವೆಚ್ಚವೂ ಬಂದಿಲ್ಲ
ಒಂದೆಡೆ ಕಾರ್ಮಿಕರ ಕೂಲಿ ಪಾವತಿಯಾಗಿಲ್ಲ. ಮತ್ತೊಂದೆಡೆ ಸಾಮಗ್ರಿ ವೆಚ್ಚವೂ ಪಾವತಿಯಾಗದ ಕಾರಣ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಸಾಮಗ್ರಿ ಪೂರೈಸಿದವರು ಅಲೆದಾಡುವಂತಾಗಿದೆ. ನರೇಗಾ ಯೋಜನೆಯಡಿ ರಾಜ್ಯದಲ್ಲಿ ₹593 ಕೋಟಿ ಸಾಮಗ್ರಿ ವೆಚ್ಚ ನೀಡುವುದು ಬಾಕಿ ಇದೆ. ಇದರಲ್ಲಿ ಬೆಳಗಾವಿ ಜಿಲ್ಲೆಯೊಂದರಲ್ಲೇ ₹37.19 ಕೋಟಿ ಬರಬೇಕಿದೆ. ‘2025ರ ಸೆಪ್ಟೆಂಬರ್‌ನಲ್ಲಿ ಸಾಮಗ್ರಿ ವೆಚ್ಚಕ್ಕಾಗಿ ಅನುದಾನ ಬಿಡುಗಡೆಯಾಗಿತ್ತು. ನಂತರ ಬಂದಿಲ್ಲ’ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.