ADVERTISEMENT

ಉದ್ಯಮಿ ಬಾಳಾಸಾಹೇಬ ಪಾಟೀಲರಿಂದ ಪಿಎಂ ಕೇರ್ಸ್‌ಗೆ ₹ 1 ಕೋಟಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 9:43 IST
Last Updated 1 ಏಪ್ರಿಲ್ 2020, 9:43 IST
ಕೋವಿಡ್–19 ವಿರುದ್ಧದ ಹೋರಾಟಕ್ಕಾಗಿ ಬೆಳಗಾವಿಯ ಉದ್ಯಮಿ ಬಾಳಾಸಾಹೇಬ ಪಾಟೀಲ ಹಾಗೂ ಪ್ಯಾಟ್ಸನ್ ಸಮೂಹದವರು ₹ 1 ಕೋಟಿ ದೇಣಿಗೆಯ ಚೆಕ್‌ ಅನ್ನು ಶಾಸಕ ಅಭಯ ಪಾಟೀಲ ಅವರಿಗೆ ನೀಡಿದರು
ಕೋವಿಡ್–19 ವಿರುದ್ಧದ ಹೋರಾಟಕ್ಕಾಗಿ ಬೆಳಗಾವಿಯ ಉದ್ಯಮಿ ಬಾಳಾಸಾಹೇಬ ಪಾಟೀಲ ಹಾಗೂ ಪ್ಯಾಟ್ಸನ್ ಸಮೂಹದವರು ₹ 1 ಕೋಟಿ ದೇಣಿಗೆಯ ಚೆಕ್‌ ಅನ್ನು ಶಾಸಕ ಅಭಯ ಪಾಟೀಲ ಅವರಿಗೆ ನೀಡಿದರು   

ಬೆಳಗಾವಿ: ಕೋವಿಡ್–19 ವಿರುದ್ಧದ ಹೋರಾಟಕ್ಕಾಗಿ ಇಲ್ಲಿನ ಉದ್ಯಮಿ ಬಾಳಾಸಾಹೇಬ ಪಾಟೀಲ ಅವರು ₹ 1 ಕೋಟಿ ದೇಣಿಗೆಯನ್ನು ಪಿಎಂ ಕೇರ್ಸ್‌ ನಿಧಿಗೆ ನೀಡಿದ್ದಾರೆ.

‘ದೇಶ ಗಂಡಾಂತರದಲ್ಲಿದೆ. ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ. ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಇದನ್ನು ಮನಗಂಡು ದೇಣಿಗೆ ನೀಡಿದ್ದೇನೆ. ಯಾರಿಗೆ ಆರ್ಥಿಕ ಸಹಾಯ ಮಾಡುವ ಸಾಮರ್ಥ್ಯ ಇದೆಯೊ ಅವರು ಪುಣ್ಯ ಕಾರ್ಯಕ್ಕೆ ಕೈ ಜೋಡಿಸಬೇಕು. ಇದೇ ನಿಜವಾದ ದೇಶ ಸೇವೆ’ ಎಂದು ಹೇಳಿದ್ದಾರೆ.

ಚೆಕ್‌ ಅನ್ನು, ಶಾಸಕ ಅಭಯ ಪಾಟೀಲ ಮೂಲಕ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.