ADVERTISEMENT

ನಕಲಿ ಕೋವಿಡ್ ವರದಿ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಮೇ 2021, 14:14 IST
Last Updated 27 ಮೇ 2021, 14:14 IST
ಬೆಳಗಾವಿ ತಾಲ್ಲೂಕಿನ ಪೀರನವಾಡಿಯಲ್ಲಿ ನಕಲಿ ಕೋವಿಡ್ ವರದಿ ನೀಡುತ್ತಿದ್ದ ಆರೋಪಿಯನ್ನು ಸಿಇಎನ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ
ಬೆಳಗಾವಿ ತಾಲ್ಲೂಕಿನ ಪೀರನವಾಡಿಯಲ್ಲಿ ನಕಲಿ ಕೋವಿಡ್ ವರದಿ ನೀಡುತ್ತಿದ್ದ ಆರೋಪಿಯನ್ನು ಸಿಇಎನ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ   

ಬೆಳಗಾವಿ: ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ನಕಲಿ ಕೋವಿಡ್ ವರದಿ (ಕೋವಿಡ್ ಪ್ರೊಫೈಲಿಂಗ್ ರಿಪೋರ್ಟ್‌) ಮತ್ತು ನಕಲಿ ಪ್ರಯೋಗಾಲಯದ ವರದಿ ನೀಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಸಿಇಎನ್ (ಸೈಬರ್,ಎಕನಾಮಿಕ್ಸ್‌ ಆ್ಯಂಡ್ ನಾರ್ಕೋಟಿಕ್) ಅಪರಾಧ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಜಿಲ್ಲೆಯ ಖಾನಾಪುರದ ನಿಂಗಾಪುರ ಗಲ್ಲಿಯ ನಿವಾಸಿ ಹಸನಸಾಬ್ ಅಬ್ದುಲ್‍ಖಾದರ್ ಸೈಯದ್ (44) ಬಂಧಿತ ಆರೋಪಿ. ಅವರು ಕೃತ್ಯಕ್ಕೆ ಬಳಸಿದ ಹಲವು ಸಾಮಗ್ರಿಗಳು, ಕಾರು, ₹ 24ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಈಗಾಗಲೇ ಹಲವು ವರದಿಗಳನ್ನು ಸಿದ್ಧಪಡಿಸಿ ಪ್ರಿಂಟ್ ತೆಗೆದು ಇಟ್ಟಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಡಿಸಿಪಿ ವಿಕ್ರಂ ಅಮಟೆ, ‘ಪಿಯುಸಿ ಓದಿರುವ ಆರೋಪಿಯು ಈ ಹಿಂದೆ ಡಯಗ್ನೋಸ್ಟಿದ್ರ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರಣಾಂತರದಿಂದ ಆ ಕೇಂದ್ರ ಮುಚ್ಚಿತು. ಆದರೆ, ಆತ ನಿಯಮ ಬಾಹಿರವಾಗಿ ಪೀರನವಾಡಿಯಲ್ಲಿ ಅದೇ ಹೆಸರಿನಲ್ಲಿ ಸೆಂಟರ್ ತೆರೆದಿದ್ದ. ₹ 2,500ರಿಂದ ₹ 3ಸಾವಿರ ಪಡೆದು ಕೋವಿಡ್ ಪ್ರೊಫೈಲಿಂಗ್‌ ವರದಿ ನೀಡುತ್ತಿದ್ದ. ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡದವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.