ADVERTISEMENT

ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 10:13 IST
Last Updated 8 ಜೂನ್ 2020, 10:13 IST
ಬೆಳಗಾವಿಯ ಎಸ್‌ಜಿಬಿಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಸಿದ್ದರಾಮಪ್ಪ ಇಟ್ಟಿ ಮಾತನಾಡಿದರು
ಬೆಳಗಾವಿಯ ಎಸ್‌ಜಿಬಿಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಸಿದ್ದರಾಮಪ್ಪ ಇಟ್ಟಿ ಮಾತನಾಡಿದರು   

ಬೆಳಗಾವಿ: ಇಲ್ಲಿನ ಎಸ್‌ಜಿಬಿಐಟಿಯಲ್ಲಿ ‘ಕೋವಿಡ್–19 ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಯಾವ ರೀತಿ ನಿಭಾಯಿಸಬೇಕು’ ಎನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಅಲ್ಲಮಪ್ರಭು ಸ್ವಾಮೀಜಿ, ‘ಎಸ್‌ಜಿಬಿಐಟಿಯಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ ಮೂಲಕ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಶ್ರಮಿಸಲಾಗುತ್ತಿದೆ. ಹೊಸ ವಿಷಯಗಳ ಕಲಿಕೆಗೆ ಲಾಕ್‌ಡೌನ್‌ ಅನುವು ಮಾಡಿಕೊಡಿಕೊಟ್ಟಿದೆ ಎಂದು ಭಾವಿಸಬೇಕು’ ಎಂದರು.

ಪ್ರಾಂಶುಪಾಲ ಡಾ.ಸಿದ್ದರಾಮಪ್ಪ ವಿ. ಇಟ್ಟಿ, ಡಾ.ಅಶೋಕ ಹುಲಗಬಾಳಿ, ಅಧ್ಯಕ್ಷ ಎಸ್.ಜಿ. ಸಂಬರಗಿಮಠ, ನಿರ್ದೇಶಕ ಡಾ.ಎಸ್.ವಿ. ಮಾನ್ವಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.