ADVERTISEMENT

ಸಾವಿನಲ್ಲೂ ಸಾರ್ಥಕತೆ; ಅಂಗಾಗ ದಾನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 12:52 IST
Last Updated 16 ಮಾರ್ಚ್ 2022, 12:52 IST

ಬೆಳಗಾವಿ: ಇಲ್ಲಿನ ಮಹಾಬಳೇಶ್ವರ ನಗರದ ನಿವಾಸಿ ಉಮೇಶ ಬಸವಣ್ಣಿ ದಂಡಗಿ (51) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರವಾದ ಗಾಯದೊಂದಿಗೆ ಬಳಲುತ್ತಿದ್ದ 51 ವರ್ಷದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಮಿದುಳು ನಿಷ್ಕ್ರಿಯಗೊಂಡಿತ್ತು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ನಾಲ್ವರ ಜೀವ ಉಳಿಸಿದ್ದಾರೆ. ಇಬ್ಬರು ದೃಷ್ಟಿದೋಷವುಳ್ಳವರಿಗೆ ಬೆಳಕಾಗಿದ್ದಾರೆ.

ಹೃದಯವನ್ನು ಇಲ್ಲಿನ ಕೆಎಲ್‌ಇ ಸೊಸೈಟಿಯ ಪ್ರಭಾಕರ ಕೋರೆ ಆಸ್ಪತ್ರೆಗೆ, ಲಿವರ್‌ ಅನ್ನು ಬೆಂಗಳೂರಿಗೆ, ಒಂದು ಕಿಡ್ನಿಯನ್ನು ಧಾರವಾಡದ ಎಸ್‌ಡಿಎಂಗೆ ಹಾಗೂ ಮತ್ತೊಂದು ಕಿಡ್ನಿಯನ್ನು ಹುಬ್ಬಳ್ಳಿಯ ತತ್ವಾದರ್ಶ ಆಸ್ಪತ್ರೆಗೆ ಬುಧವಾರ ಆಂಬ್ಯುಲೆನ್ಸ್‌ಗಳಲ್ಲಿ ಬುಧವಾರ ಕಳುಹಿಸಿಕೊಡಲಾಯಿತು. ಆ ಕುಟುಂಬದವರ ಸಮ್ಮತಿಯ ಮೇರೆಗೆ ಈ ಪ್ರಕ್ರಿಯೆಗಳು ನಡೆದಿವೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಕೆಎಲ್‍ಇ ಆಸ್ಪತ್ರೆಯಿಂದ ಸಾಂಬ್ರಾ ವಿಮಾನನಿಲ್ದಾಣದವರೆಗೆ ಝೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ವಿಮಾನದ ಮೂಲಕ ಲಿವರ್‌ ಅನ್ನು ಬೆಂಗಳೂರಿಗೆ ರವಾನಿಸಲಾಯಿತು ಎಂದು ತಿಳಿದುಬಂದಿದೆ.

ಉಮೇಶ ಆರ್‌ಎಸ್‌ಎಸ್‌ ಕಾರ್ಯಕರ್ತ ಆಗಿದ್ದರು ಎಂದು ತಿಳಿದುಬಂದಿದೆ. ಅವರಿಗೆ ತಾಯಿ, ಪತ್ನಿ, ಮಗಳು, ಸಹೋದರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.