ADVERTISEMENT

ಕೈದಿಗಳಿಗೆ ಪೇಪರ್‌ ಬ್ಯಾಗ್‌ ತಯಾರಿಕೆ ತರಬೇತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 11:34 IST
Last Updated 9 ಜನವರಿ 2019, 11:34 IST
ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆ ಆಯೋಜಿಸಿದ್ದ ಪೇಪರ್‌ ಬ್ಯಾಗ್‌ ತರಬೇತಿಯ ನೋಟ
ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆ ಆಯೋಜಿಸಿದ್ದ ಪೇಪರ್‌ ಬ್ಯಾಗ್‌ ತರಬೇತಿಯ ನೋಟ   

ಬೆಳಗಾವಿ: ಕೆಎಲ್ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕ ಮತ್ತು ಅಂಕುರ ವಿಶೇಷ ಮಕ್ಕಳ ಶಾಲೆ ವತಿಯಿಂದ ಇಲ್ಲಿನ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳಿಗೆಪೇಪರ್‌ ಬ್ಯಾಗ್‌ ತಯಾರಿಕೆ ತರಬೇತಿಯನ್ನು ಈಚೆಗೆ ಆಯೋಜಿಸಲಾಗಿತ್ತು.

ಕೆಎಲ್ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ಡಾ.ಪ್ರೀತಿ ದೊಡ್ಡವಾಡ ಉದ್ಘಾಟಿಸಿ ಮಾತನಾಡಿ, ‘ಬಿಡುಗಡೆ ನಂತರ ಸಮಾಜದಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸಲು ಇಂತಹ ತರಬೇತಿಗಳು ಅವಶ್ಯ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಷಯಗಳಲ್ಲಿ ತರಬೇತಿಗಳನ್ನು ನೀಡಲಾಗುವುದು. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಕಾರಗೃಹದ ಚೀಫ್‌ ಸೂಪರಿಂಟೆಂಡೆಂಟ್ ಟಿ.‍ಪಿ. ಶೇಷ ಮಾತನಾಡಿ, ‘ಜೈಲಿನಿಂದ ಬಿಡುಗಡೆಯಾದ ಬಳಿಕ ಆರ್ಥಿಕವಾಗಿ ಸಬಲರಾಗಲು ಹಾಗೂ ಬದುಕು ರೂಪಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳ ಸಯೋಗದೊಂದಿಗೆ ವಿವಿಧ ತರಬೇತಿಗಳನ್ನು ನಿವಾಸಿಗಳಿಗೆ ಆಯೋಜಿಸಲಾಗುತ್ತಿದೆ. ಇವು ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತವೆ. ಪೇಪರ್‌ ಬ್ಯಾಗ್ ತಯಾರಿಕೆಗೆ ಹೆಚ್ಚಿನ ಬಂಡವಾಳ ಬೇಕಾಗುವುದಿಲ್ಲ. ಮನೆಯಲ್ಲಿ ಇರುವ ರದ್ದಿ ಪೇಪರ್‌ಗಳಿಂದಲೇ ತಯಾರಿಸಬಹುದು. ಪ್ಲಾಸ್ಟಿಕ್‌ ತ್ಯಜಿಸುವ ನಿಟ್ಟಿನಲ್ಲಿ ಪೇಪರ್‌ ಬ್ಯಾಗ್‌ಗಳನ್ನು ಬಳಸುವುದು ಮಹತ್ವದ್ದಾಗಿದೆ’ ಎಂದರು.

ADVERTISEMENT

ಅಂಕುರ ಶಾಲೆ ಕಾರ್ಯದರ್ಶಿ ಗಾಯತ್ರಿ ಗಾವಡೆ, ಸಂಪನ್ಮೂಲ ವ್ಯಕ್ತಿ ವೈಶಾಲಿ ಭಾತಕಾಂಡೆ ಹಾಗೂ ಕಾರಾಗೃಹ ಸ್ಥಾಯಿ ಸಲಹಾ ಮಂಡಳಿ ಸದಸ್ಯ ಅಭಿಮನ್ಯು ಭಾಗವಹಿಸಿದ್ದರು.

ಜೈಲರ್‌ ಎಸ್.ಐ. ಶಹಾಪುರಕರ, ಸಿಬ್ಬಂದಿ ಎಂ.ಬಿ. ಗೂಳಿ ಇದ್ದರು. ಶಿಕ್ಷಕಿ ಶ್ರೀಮತಿ ಎಸ್.ಎಂ. ಕೋಲ್ಕಾರ ಕಾರ್ಯಕ್ರಮ ನಿರೂಪಿಸಿದರು. ನಿವಾಸಿಗಳಾದ ಈರವ್ವ ತಿಗಡಿ ಹಾಗೂ ಪಾರ್ವತಿ ಪೂಜಾರಿ ಪ್ರಾರ್ಥಿಸಿದರು. ಉಮಾದೇವಿ ಹಿರೇಮಠ ವಂದಿಸಿದರು.

ರಾಜಶ್ರೀ, ಶುಭಾಂಗಿ ಕುರನಕರ ಹಾಗೂ ನಿಕಿಲ್ ತರಬೇತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.