ADVERTISEMENT

ಪರಕನಹಟ್ಟಿ ಪಿಕೆಪಿಎಸ್‌ ಅಮೃತಮಹೋತ್ಸವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 2:39 IST
Last Updated 10 ಫೆಬ್ರುವರಿ 2026, 2:39 IST
ಹುಕ್ಕೇರಿ ತಾಲ್ಲೂಕಿನ ಪರಕನಹಟ್ಟಿ ಪಿಕೆಪಿಎಸ್ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಶಾಸಕ ನಿಖಿಲ್ ಕತ್ತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಸೇರಿದಂತೆ ಗಣ್ಯರು ಸೋಮವಾರ ಉದ್ಘಾಟಿಸಿದರು
ಹುಕ್ಕೇರಿ ತಾಲ್ಲೂಕಿನ ಪರಕನಹಟ್ಟಿ ಪಿಕೆಪಿಎಸ್ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಶಾಸಕ ನಿಖಿಲ್ ಕತ್ತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಸೇರಿದಂತೆ ಗಣ್ಯರು ಸೋಮವಾರ ಉದ್ಘಾಟಿಸಿದರು   

ಪರಕನಟ್ಟಿ (ಹುಕ್ಕೇರಿ): ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜನಸಾಮಾನ್ಯರ ಸೇವೆಗಾಗಿ ಹುಟ್ಟಿಕೊಂಡಿವೆ. ತಾಲ್ಲೂಕಿನ ಸಹಕಾರ ಸಂಘ ಸಂಸ್ಥೆಗೆಗಳಲ್ಲಿ ಈಚೆಗೆ ಹೊರಗಿನವರು ಬಂದು ಸಹಕಾರ ರಂಗಕ್ಕೆ ರಾಜಕೀಯ ಲೇಪನ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಸಹಕಾರ ಸಂಘದ ಸದಸ್ಯರು ಎಚ್ಚರದಿಂದ ಇರಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಚಾಟಿ ಬೀಸಿದರು.

ಸೋಮವಾರ ತಾಲ್ಲೂಕಿನ ಪರಕನಹಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಮಾತನಾಡಿ, ಪರಕನಹಟ್ಟಿಯ ಪಿಕೆಪಿಎಸ್ ಸಂಘವು ಹೆಮ್ಮರವಾಗಿ ಬೆಳೆಯಲು ಜನರ ವಿಶ್ವಾಸ ಸಹಕಾರ ಮುಖ್ಯವಾಗಿದೆ. ಕತ್ತಿ ಕುಟುಂಬದವರು ಸಹಕಾರಿ ಸಂಘಗಳ ಅಭಿವೃದ್ಧಿಗೆ ಬದ್ಧರಾಗಿದ್ಧೇವೆ. ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಸಂಘದ ಅಧ್ಯಕ್ಷ ಬಸವರಾಜ ಸುಲ್ತಾನಪುರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ಬಿಜೆಪಿ ರಾಜ್ಯ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಹುಕ್ಕೇರಿ ಗ್ರಾಮೀಣ ವಿಧ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಸತ್ಯಪ್ಪ ನಾಯಿಕ, ಕಲಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ ಇದ್ದರು.

ಹುಕ್ಕೇರಿ ತಾಲ್ಲೂಕಿನ ಪರಕನಹಟ್ಟಿ ಪಿಕೆಪಿಎಸ್ ಸಂಘದ ಅಮೃತ ಮಹೋತ್ಸವ ಸಮಾರಂಭದ ನಿಮಿತ್ಯ ನಾಮಫಲಕವನ್ನು ಶಾಸಕ ನಿಖಿಲ್ ಕತ್ತಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಸೇರಿದಂತೆ ಗಣ್ಯರು ಸೋಮವಾರ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.