ADVERTISEMENT

ಹುಕ್ಕೇರಿ | ರಿಯಾಯಿತಿ ದರದಲ್ಲಿ ಕೀಟನಾಶಕ ಔಷಧ: ಸದ್ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:09 IST
Last Updated 18 ಆಗಸ್ಟ್ 2024, 14:09 IST
ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೀಟನಾಶಕ ಔಷಧ ಮಳಿಗೆಯನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಉದ್ಘಾಟಿಸಿದರು
ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೀಟನಾಶಕ ಔಷಧ ಮಳಿಗೆಯನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಉದ್ಘಾಟಿಸಿದರು   

ಹುಕ್ಕೇರಿ: ‘ರೈತರಿಗೆ ಅಗತ್ಯವಿರುವ ಕೀಟನಾಶಕ ಔಷಧ ಕೈಗೆಟುಕುವ ದರದಲ್ಲಿ ದೊರೆಯುವ ಸದುದ್ದೇಶದಿಂದ  ಕೀಟನಾಶಕ ಔಷಧ ಮಳಿಗೆ ಉದ್ಘಾಟಿಸಲಾಗಿದೆ’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.‌

ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕೀಟನಾಶಕ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಶೇ30ರಷ್ಟು ರಿಯಾಯಿತಿ ದರದಲ್ಲಿಕೀಟನಾಶಕ ಔಷಧ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು

‘ರೈತರು ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದಾರೆ. ನರೇಗಾ ಯೋಜನೆಯಡಿ ಸರ್ಕಾರ ಕೂಲಿ ಕೆಲಸ ಒದಗಿಸುತ್ತಿದ್ದು, ಹೊಲ-ಗದ್ದೆಗಳಲ್ಲಿ ಕೂಲಿ ಕಾರ್ಮಿಕರು ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಯಮಕನಮರಡಿ ಹುಣಸಿಕೊಳ್ಳ ಮಠದ ಸಿದ್ದಬಸವ ದೇವರು ಸಾನ್ನಿಧ್ಯ ವಹಿಸಿದ್ದರು.

ಕೃಷಿ ಪತ್ತಿನ ಸಂಘದ ಅಧ್ಯಕ್ಷ ಪ್ರಕಾಶ ನಿಲಜಿ, ವಿದ್ಯಾರಣ್ಯ ಹಿರೇಮಠ, ಅಜೀತ ಮುನ್ನೊಳ್ಳಿ, ಜಯಪಾಲ ಹೊನ್ನನವರ, ಶಶಿಕಾಂತ ಮಠಪತಿ, ಅಪ್ಪಾಸಾಹೇಬ ಸಂಕನ್ನವರ, ವಿದ್ಯಾಧರ ಹರಾರಿ, ಚೆನ್ನಬಸವ ಖೋತ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.