ADVERTISEMENT

ಬೆಳಗಾವಿ: ಪಿಎಫ್‌ಐ, ಎಸ್‌ಡಿಪಿಐನ ಬಂಧಿತ ಏಳು ಮುಖಂಡರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 3:55 IST
Last Updated 4 ಅಕ್ಟೋಬರ್ 2022, 3:55 IST
   

ಬೆಳಗಾವಿ: ಎಸ್‌ಡಿಪಿಐ ಹಾಗೂ ‌ನಿಷೇಧಿತ ಪಿಎಫ್ಐ ಸಂಘಟನೆಯ ಏಳು ಮುಖಂಡರಿಗೆ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಬೆಳಗಾವಿ ಕಾನೂನು ‌ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ‌ಗಡಾಡಿ ಅವರು ಆರೋಪಿಗಳಿಂದ ತಲಾ ₹ 50 ಸಾವಿರದ ಬಾಂಡ್‌ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ.

ಆಜಂ ನಗರ ನಿವಾಸಿಗಳಾದ ಪಿಎಫ್‌ಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಝಕೀವುಲ್ಲಾ ಫೈಜಿ, ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರದ ಪಿಎಫ್‌ಐ ಕಾರ್ಯಕರ್ತರಾದ ಸಲಾವುದ್ದೀನ್ ಖಿಲ್ಲೇವಾಲೆ, ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ, ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್‌ ಜಾಮೀನು ಸಿಕ್ಕವರು.

ADVERTISEMENT

ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನು ಸೆ. 27ರಂದು ಬಂಧಿಸಲಾಗಿತ್ತು. ಎಲ್ಲ ಮೇಲೂ ಸಿಆರ್‌ಪಿಸಿ 110 ಕಲಂ ಅಡಿ ‍ಪ್ರಕರಣ ದಾಖಲಿಸಲಾಗಿದೆ.

ದಾಳಿ ವೇಳೆ ಪರಾರಿಯಾದ ಪಿಎಫ್ಐ ‌ಜಿಲ್ಲಾ ಘಟಕದ ಅಧ್ಯಕ್ಷ ನವೀದ್ ‌ಕಟಗಿ ಬಂಧನಕ್ಕೆ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.