ADVERTISEMENT

ಅಧ್ಯಕ್ಷೆಯಾಗಿ ಲಕ್ಷ್ಮಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:29 IST
Last Updated 30 ಜುಲೈ 2023, 14:29 IST
ಸುಟ್ಟಟ್ಟಿ ಪಿಕೆಪಿಎಸ್‌ನ ಅಧ್ಯಕ್ಷೆಯಾಗಿ ಲಕ್ಷ್ಮಿ ನಾಯಿಕ ಮತ್ತು ಉಪಾಧ್ಯಕ್ಷೆಯಾಗಿ ಶಿವಾನಂದ ಹೆಗಡೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು
ಸುಟ್ಟಟ್ಟಿ ಪಿಕೆಪಿಎಸ್‌ನ ಅಧ್ಯಕ್ಷೆಯಾಗಿ ಲಕ್ಷ್ಮಿ ನಾಯಿಕ ಮತ್ತು ಉಪಾಧ್ಯಕ್ಷೆಯಾಗಿ ಶಿವಾನಂದ ಹೆಗಡೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು   

ಪರಮಾನಂದವಾಡಿ: ಸಮೀಪದ ಸುಟ್ಟಟ್ಟಿ ಪಿಕೆಪಿಎಸ್‌ನ 2ನೇ ಅವಧಿಗೆ ಅಧ್ಯಕ್ಷೆಯಾಗಿ ಲಕ್ಷ್ಮಿ ನಾಯಿಕ ಮತ್ತು ಉಪಾಧ್ಯಕ್ಷೆಯಾಗಿ ಶಿವಾನಂದ ಹೆಗಡೆ ಅವಿರೋಧವಾಗಿ ಆಯ್ಕೆಯಾದರು. ಅವರ ಬೆಂಬಲಿಗರು ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.

ನಂತರ ಮಾತನಾಡಿದ ಲಕ್ಷ್ಮಿ, ‘ಎಲ್ಲರ ಸಹಕಾರದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಜನರ ನಿರೀಕ್ಷೆಯಂತೆ ಕೆಲಸ ಮಾಡಿ, ಅವರ ವಿಶ್ವಾಸ ಉಳಿಸಿಕೊಳ್ಳುತ್ತೇನೆ’ ಎಂದು ಹೇಳಿದರು.

ಪಶುಸಂಗೋಪನೆ ಮತ್ತು ಪಶುಪಾಲನೆ ಇಲಾಖೆ ತಾಲ್ಲೂಕು ಅಧಿಕಾರಿ ಡಾ. ಸಚಿನ ಸೌಂದಲಗಿ ಚುನಾವಣಾಧಿಕಾರಿಯಾಗಿ ಕೆಲಸ ಮಾಡಿದರು.

ಮುರಾರಿ ಬಾನೆ, ಸದಸ್ಯರಾದ ಶಾಂತಾ ಹಟ್ಟಿಮನಿ, ಕಲ್ಮೇಶ್ವರ ಬಾನೆ, ಸಿದ್ದಪ್ಪ ಖಿಲಾರೆ, ಸುಭಾಷ ಮಾನೆ, ಮುಖಂಡರಾದ ವಾಮಣ್ಣ ಹಟ್ಟಿಮನಿ, ಸಿದ್ದಪ್ಪ ಒಡೆಯರ, ಲಕ್ಷ್ಮಣ ಹೆಗಡೆ, ಜಯಕರ ಸವದತ್ತಿ, ತೇಜುಗೌಡ ಕುಸನಾಳೆ, ಅಜಿತ ಹೆಗಡೆ, ಕರೆಪ್ಪ ಪೂಜೇರಿ, ಅನಿಲ ದೇಸಾಯಿ, ಮಹಾದೇವ ನಾಯಿಕ, ಪಿಡಿಒ ಮಹಾದೇವ ನಡವಿನಮನೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.