ಬೆಳಗಾವಿ: ಹೊಸದಾಗಿ 11 ಕೆ.ವಿ. ಮಾರ್ಗಗಳ ನಿರ್ಮಾಣ ಕೈಗೊಳ್ಳುವುದರಿಂದಾಗಿ 110 ಕೆ.ವಿ. ಎಂ.ಕೆ. ಹುಬ್ಬಳ್ಳಿ ಉಪ ಕೇಂದ್ರ ವ್ಯಾಪ್ತಿಯ ಖಾನಾಪೂರ ತಾಲ್ಲೂಕಿನ ಇಟಗಿ, ಬೋಗೂರ, ಬೇಡರಹಟ್ಟಿ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಹಿರೇಹಟ್ಟಿಹೊಳಿ, ಚಿಕ್ಕಹಟ್ಟಿಹೊಳಿ, ಜಿಕನೂರ, ಗಾಡಿಕೊಪ್ಪ, ಪಾರಿಶ್ವಾಡ ಗ್ರಾಮಗಳಿಗೆ ಹಾಗೂ ಅಲ್ಲಿನ ನೀರಾವರಿ ಪಂಪ್‌ಸೆಟ್‌ಗಳ ಪ್ರದೇಶಗಳಿಗೆಜುಲೈ 14ರಿಂದ ಜುಲೈ 21ರವರೆಗೆ ನಿತ್ಯವೂ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಳಗಾವಿ: ನಗರಕ್ಕೆ ನೀರು ಪೂರೈಸುವ 600 ಮೀ. ವ್ಯಾಸದ ಎಂ.ಎಸ್. ಮುಖ್ಯ ಕೊಳವೆ ಮಾರ್ಗದಲ್ಲಿ ವಿಜಯನಗರ ಬಸ್ ನಿಲ್ದಾಣದ ಸಮೀಪ ಬುಧವಾರ ಸೋರಿಕೆ ಕಂಡುಬಂದಿದೆ. ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದ್ದು ಬುಧವಾರ (ಜುಲೈ 14) 24x7 ಪ್ರಾತ್ಯಕ್ಷಿಕ ವಲಯ ಸಹಿತ ಎಲ್ಲ ಕಡೆಯೂ ನೀರು ಸರಬರಾಜಿನಲ್ಲಿ ವ್ಯಯಯ ಉಂಟಾಗಲಿದೆ.
ಹಿಡಕಲ್ ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರು ಪೂರೈಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.