ADVERTISEMENT

ಪ್ರವಾಹ | #PrayForUttarkaranataka ನೆರವಿಗೆ ಧಾವಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 14:41 IST
Last Updated 7 ಆಗಸ್ಟ್ 2019, 14:41 IST
   

ಬೆಳಗಾವಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಉಂಟಾಗಿರುವುದರಿಂದ, ದಕ್ಷಿಣ ಕರ್ನಾಟಕದವರು ನೆರವಾಗಬೇಕು ಎಂಬ ‍‍ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿವೆ. ವಾಟ್ಸ್ಆ್ಯಪ್‌ನಲ್ಲೂ ಹರಿದಾಡುತ್ತಿವೆ.

#PrayForUttarkaranataka ಹ್ಯಾಷ್‌ಟ್ಯಾಗ್‌ನಲ್ಲಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ‘ನಾವು ಉತ್ತರ ಕರ್ನಾಟಕದವರು ಎಷ್ಟು ವಿಶಾಲ ಹೃದಯದವರು ಅಂದರೆ ದೇಶದ ಯಾವುದೇ ಮೂಲೆಯಲ್ಲಿ ಪ್ರಕೃತಿ ವಿಕೋಪವಾದಾಗ ಸಹಾಯ–ಸಹಕಾರಕ್ಕೆ ಮುಂದೆ ಬರುತ್ತೇವೆ. ಆದರೆ, ಉತ್ತರ ಕರ್ನಾಟಕದಲ್ಲಿ ತೊಂದರೆ ಆದಾಗ ಯಾರೊಬ್ಬರೂ ಮಾತಾಡುವುದಿಲ್ಲ. ಕೊಡಗು, ಕೇರಳ, ಚೆನ್ನೈನಲ್ಲಿ ಆದ ತೊಂದರೆಗೆ ನಾವು ಕೈಲಾದ ಸಹಾಯ ಮಾಡಿದ್ದೇವೆ. ಉತ್ತರ ಕರ್ನಾಟಕದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಹಳ್ಳ, ಕೊಳ್ಳ, ನದಿ ಉಕ್ಕಿ ಹರಿಯುತ್ತಿವೆ. ಊರೆಲ್ಲಾ ನೀರಿನಲ್ಲಿ ಮುಳುಗಿವೆ. ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸಹಾಯ ಮಾಡಲಿಲ್ಲವೆಂದರೂ ಪರವಾಗಿಲ್ಲ, ಉತ್ತರ ಕರ್ನಾಟಕವನ್ನು ಆ ಮಳೆರಾಯನಿಂದ ಉಳಿಸಲು ಪ್ರಾರ್ಥಿಸಿ’ ಎಂದು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT