ADVERTISEMENT

ಸಂಕ್ರಾಂತಿ ಹಬ್ಬವು ಕೃಷಿ, ಸಂಸ್ಕೃತಿ, ಆಧ್ಯಾತ್ಮಿಕತೆಯ ಸಂಗಮ–ಪ್ರೀತಿ ದೊಡವಾಡ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 4:26 IST
Last Updated 30 ಜನವರಿ 2026, 4:26 IST
ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಪ್ರೀತಿ ದೊಡವಾಡ ಅವರನ್ನು ಸನ್ಮಾನಿಸಲಾಯಿತು
ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಪ್ರೀತಿ ದೊಡವಾಡ ಅವರನ್ನು ಸನ್ಮಾನಿಸಲಾಯಿತು   

ಬೆಳಗಾವಿ: ‘ಸಂಕ್ರಾಂತಿ ಹಬ್ಬವು ಕೃಷಿ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗಿದೆ. ಪರಸ್ಪರ ಪ್ರೀತಿ, ಕೃತಜ್ಞತೆ ಮತ್ತು ಸಮೃದ್ಧಿ ಸಂದೇಶವನ್ನು ಸಾರುತ್ತದೆ’ ಎಂದು ಕೆಎಲ್‌ಇ  ಸಂಸ್ಥೆಯ ನಿರ್ದೇಶಕಿ ಡಾ.ಪ್ರೀತಿ ದೊಡವಾಡ  ಹೇಳಿದರು.

ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಬುಧವಾರ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಿದ್ದ ಸಂಪ್ರದಾಯ-ಸಂಭ್ರಮ,  ಮಕರ ಸಂಕ್ರಾಂತಿಯ ಅರಿಶಿಣ ಕುಂಕುಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ರಾಣಿ ಚನ್ನಮ್ಮ ಮಹಿಳಾ ಬ್ಯಾಂಕ್ ಅಧ್ಯಕ್ಷ ಆಶಾ‌ತಾಯಿ ಕೋರೆ, ಲಿಂಗಾಯತ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಶೈಲಜಾ ಬಿಂಗೆ, ನೀಲಗಂಗಾ ಚರಂತಿಮಠ, ವಿಜಯಲಕ್ಷ್ಮಿ ಪುಟ್ಟಿ, ಮಧುಮತಿ ಹಿರೇಮಠ, ರಕ್ಷಾ ದೇಗಿನಾಳ, ಸರೋಜಾ ನಿಶಾನ್ಹಾರ, ಆಶಾ ಪಾಟೀಲ, ಜ್ಯೋತಿ ಬದಾಮಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.