ADVERTISEMENT

‘ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 12:11 IST
Last Updated 17 ಫೆಬ್ರುವರಿ 2020, 12:11 IST
ಅಥಣಿಯಲ್ಲಿ ದರ್ಗಾ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲವ್ವ ಮುರಗುಂಡಿ ಮತ್ತು ಗಣ್ಯರು ಉದ್ಘಾಟಿಸಿದರು
ಅಥಣಿಯಲ್ಲಿ ದರ್ಗಾ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲವ್ವ ಮುರಗುಂಡಿ ಮತ್ತು ಗಣ್ಯರು ಉದ್ಘಾಟಿಸಿದರು   

ಅಥಣಿ: ‘ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಕುಟುಂಬ ಮತ್ತು ಶಾಲೆ ಮಾತ್ರವಲ್ಲದೆ ಸಮಾಜವೂ ಮಹತ್ತರವಾದ ಪ್ರಭಾವ ಬೀರುತ್ತದೆ’ ಎಂದು ಮುಖಂಡ ಚಿದಾನಂದ ಮುಕಣಿ ಹೇಳಿದರು.

ಇಲ್ಲಿನ ದರ್ಗಾ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‌‘ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಯುವ ಸಮುದಾಯ ತಮ್ಮ ಚಿಂತನೆಗಳನ್ನು ಪುನರ್ ರೂಪಿಸಿಕೊಳ್ಳಲು ಮುಂದಾಗಬೇಕು’ ಎಂದು ಅತಿಥಿಯಾಗಿದ್ದ ವಿನಾಯಕ ಆಸಂಗಿ ತಿಳಿಸಿದರು.

ADVERTISEMENT

ಬೆಂಗಳೂರಿನಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀರಪ್ಪ ಮಲಾಬದಿ, ‘ದೇಶದ ಮಹಾನ್ ನಾಯಕರನ್ನು ಜಾತಿ, ಧರ್ಮಕ್ಕೆ ಸೀಮಿತವಾಗಿಸುವ ಮೂಲಕ ಅವರ ಶೌರ್ಯ ಮತ್ತು ತ್ಯಾಗಕ್ಕೆ ಅಪಮಾನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮತ್ತು ಸರ್ವಧರ್ಮ ಸಮಭಾವ ಮನಸ್ಥಿತಿ ಬೆಳೆಸುವುದು ಈಗಿನ ಅಗತ್ಯವಾಗಿದೆ’ ಎಂದರು.

ಮುಖಂಡ ಸುರೇಶ ತಾಕತರಾವ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲವ್ವ ಮುರಗುಂಡಿ, ಉಪಾಧ್ಯಕ್ಷ ಎಂ.ಸಿ. ಜಾಬಗೌಡರ, ಸದಸ್ಯರಾದ ಮುದಕಣ್ಣ ಶೇಗುಣಸಿ, ಶಿವಾನಂದ ಇಂಗಳಿ, ಯಲ್ಲಾಲಿಂಗ ಪಾಟೀಲ, ಮಹಾದೇವ ಬಿಸಲನಾಯಿಕ, ವಿಠ್ಠಲ ಮಲಾಬದಿ, ಶ್ರೀಶೈಲ ದಳವಾಯಿ, ಸಿದ್ದಪ್ಪ ಪಾಟೀಲ, ಅಜಿತ ಶಿಂಧೆ, ರಾಯಪ್ಪ ಬಾಗಿ, ಗುರು ಕೋಳಿ, ಅಭಿಷೇಕ ಅಂಬಿ, ಮಹಾಂತೇಶ ಇಂಗಳಿ ಇದ್ದರು.

ಶಿಕ್ಷಕರಾದ ಸಂಗಮೇಶ ಹಚಡದ ನಿರೂಪಿಸಿದರು. ಅರವಿಂದ ಭಂಡಾರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.