ಪ್ರಾತಿನಿಧಿಕ ಚಿತ್ರ
ಹುಕ್ಕೇರಿ: ‘ಸುಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆದಿರುವ ಅಪಪ್ರಚಾರ ಖಂಡಿಸಿ ತಾಲ್ಲೂಕಿನ ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಆ.19 ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಕ್ಯಾರಗುಡ್ಡ ಔಜೀಕರ ಆಶ್ರಮದ ಮಂಜುನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಧರ್ಮಸ್ಥಳ ಸದ್ಭಕ್ತರು, ಸರ್ವ ಧರ್ಮೀಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಹಾವೀರ ಸಮೂಹ ಸಂಸ್ಥೆಯ ಅಧ್ಯಕ್ಷ, ಮಹಾವೀರ ನಿಲಜಗಿ ಮಾತನಾಡಿ, ‘ಆ.19 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಅಡಿವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್‌ವರೆಗೆ ತಾಲ್ಲೂಕಿನ ಸಾವಿರಾರು ಭಕ್ತರು ಪ್ರತಿಭಟನೆಯಲ್ಲಿ ಭಾಗವಹಿಸುವರು’ ಎಂದರು.
ಸಮಾಜದ ಹಿರಿಯ ಮುಖಂಡರಾದ ಗುರು ಕುಲಕರ್ಣಿ, ಸತ್ಯಪ್ಪ ನಾಯಿಕ, ಜೈನ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಾಹುಬಲಿ ನಾಗನೂರಿ, ವಿಶ್ವಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಶಿವಾರಾಜ ನಾಯಿಕ, ಸುನೀಲ ಪರ್ವತರಾವ, ಮಹಾವೀರ ನಿಲಜಗಿ, ಹುಕ್ಕೇರಿ ಹಾಲಮತದ ಸಮಾಜದ ಅಧ್ಯಕ್ಷ ಜಯಪ್ರಕಾಶ ಕರಜಗಿ, ಹಿರಿಯ ವಕೀಲ ಭೀಸೇನ ಬಾಗಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.