ಕಬ್ಬೂರ: ಪಟ್ಟಣ ಪಂಚಾಯಿತಿ ರಚನೆಯಾಗಿ ಇಲ್ಲಿಯವರೆಗೆ ಚುನಾವಣೆಯಾಗದೇ ಇರುವುದರಿಂದ ಅಧಿಕಾರಿಗಳೇ ಆಡಳಿತಾಧಿಕಾರಿ ಆಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನಾಗರಿಕರು ಗುರುವಾರ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ನೂತನ ಪಟ್ಟಣ ಪಂಚಾಯಿತಿ ಕಾರ್ಯಾಲಯ ಶಾಸಕರ ಅಥವಾ ಸಂಸದರ ಅನುದಾನದಲ್ಲಿ ನಿರ್ಮಾಣವಾಗಿದೆಯೋ ಅಥವಾ ಸ್ಥಳೀಯ ಸಂಸ್ಥೆಯ ಅನುದಾನದಲ್ಲಿ ಆಗಿದೆಯೋ ತಿಳಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆಂದು ರಾಯಬಾಗ ಶುಗರ್ಸ್‌ನ ನಿರ್ದೇಶಕ ಅಂಬುಪ್ರಸಾದ ನರೋಟೆ ಆರೋಪಿಸಿದರು.
ಸಾರ್ವಜನಿಕರ ದುಡ್ಡು ಸಾರ್ವಜನಿಕರಿಗೆ ಅವಶ್ಯವಿರುವ ಕಾಮಗಾರಿಗಳಿಗೆ ಆಗಲಿ ಹೊರತು; ಮಾಡಿದ ಕಾಮಗಾರಿ ಮತ್ತೆ ಮಾಡಿ ಸಾರ್ವಜನಿಕರ ಹಣ ಪೋಲಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಹಾಕುವುದಾಗಿ ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಚಿಕ್ಕೋಡಿ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ, ‘ಪ್ರತಿ ಶುಕ್ರವಾರ ನಾನೇ ಖುದ್ದಾಗಿ ಬಂದು ನಿಮ್ಮ ಸಮಸ್ಯೆಗಳಿಗೆ ಸ್ಪಂಧಿಸುತ್ತೇನೆ’ ಎಂದು ಹೇಳಿದರು.
ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳ ಕರ್ತವ್ಯ ಲೋಪ ಕಂಡು ಬಂದರೆ ಅವರ ಮೇಲೆ ಸೂಕ್ತಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಅಂಬುಪ್ರಸಾದ ನರೋಟೆ, ಅಮೀರ ಮುಲ್ತಾನಿ, ಶಂಕರ ದಳವಾಯಿ, ಸಿದ್ಧಪ್ಪ ಘೇವಾರಿ, ರಾಮು ಪೂಜೇರಿ, ಸುರೇಶ ಭಗವತಿ, ಸಿದ್ರಾಮ ನಾಯಿಕ, ಹಾಲಪ್ಪ ಹೊಸೂರೆ, ಈರಪ್ಪ ನಾಯಿಕ, ನಾಗಪ್ಪ ಬಾಡದವರ, ಶಂಕರ ಪೂಜೇರಿ, ಸುಧೀರ ತೋರಣಹಳ್ಳಿ, ಮಹಾದೇವ ದೇಸಾಯಿ, ಮುರಳಿಧರ ದಳವಾಯಿ, ಭೂತಪ್ಪ ಹಿರೇಕುರಬರ, ಭೀಮಪ್ಪ ಬೆಳಗಲಿ, ದೇವಪ್ಪ ರೊಟ್ಟಿ, ಗಂಗಪ್ಪ ಬಾನಿ, ಶಂಕರ ಕಾಡೇಶಗೋಳ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.