ADVERTISEMENT

ವಕೀಲರ ಮೇಲೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:39 IST
Last Updated 30 ಮಾರ್ಚ್ 2023, 5:39 IST
ಬೆಳಗಾವಿಯಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಅಥಣಿಯಲ್ಲಿ ಬುಧವಾರ ವಕೀಲರ ಸಂಘದಿಂದ ಉಪ ತಹಶೀಲ್ದಾರ್‌ ಮನವಿ ಸಲ್ಲಿಸಲಾಯಿತು
ಬೆಳಗಾವಿಯಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಅಥಣಿಯಲ್ಲಿ ಬುಧವಾರ ವಕೀಲರ ಸಂಘದಿಂದ ಉಪ ತಹಶೀಲ್ದಾರ್‌ ಮನವಿ ಸಲ್ಲಿಸಲಾಯಿತು   

ಅಥಣಿ: ವಾಹನ ನಿಲುಗಡೆ ವಿಚಾರವಾಗಿ ಪೊಲೀಸರು ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಖು ಎಂದು ಆಗ್ರಹಿಸಿ ಅಥಣಿ ವಕೀಲರ ಸಂಘದಿಂದ ಶಿವಯೋಗಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮೇತ್ರಿ ಮಾತನಾಡಿ, ‘ಮೂಲತಃ ರಾಮದುರ್ಗದ ವಕೀರೊಬ್ಬರು ಪ್ರಸ್ತುತ ಬೆಳಗಾವಿಯಲ್ಲಿ ವೃತ್ತಿ ನಡೆಸುತ್ತಿದ್ದು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಠಾಣೆ ಹಿಂಬದಿ ವಾಹನ ನಿಲ್ಲಿಸಿದ್ದರು. ಈ ವೇಳೆ ಮಹಿಳಾ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ ವಾಹನ ತೆಗೆಯುವಂತೆ ಹೇಳಿದ್ದಾರೆ. ವಾದ-ವಿವಾದ ನಡೆದು ಪರಿಸ್ಥಿತಿ ಹಲ್ಲೆ ನಡೆಸುವ ಹಂತಕ್ಕೆ ಹೋಗಿದೆ. ಪೊಲೀಸರು ಯುವ ವಕೀಲನನ್ನು ಥಳಿಸಿದ್ದಾರೆ’ ಎಂದು ಆರೋಪಿಸಿದರು.

ಡಿ.ಬಿ.ಠಕ್ಕಣ್ಣವರ, ವಿ.ಎಸ್. ಪಾಟೀಲ, ಕಿರಣ ಸಬಕಾಳೆ, ಎಸ್.ಎಸ್. ಪಾಟೀಲ, ಅರುಣ ಮೇಲ್ಗಡೆ, ಎಸ್.ಕೆ. ಮಟ್ಟೆಪ್ಪನವರ, ಬಿ.ಪಿ. ಕಾಂಬಳೆ, ಮಾದೇವ ಯಕ್ಕಂಚಿ, ಪಾಂಡು ಡೋಕೆ ಸೇರಿದಂತೆ ಇತರರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.