
ಬೈಲಹೊಂಗಲ: ಬಾಂಗ್ಲಾ ದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ದೌರ್ಜನ್ಯ ಖಂಡಿಸಿ ವಿಶ್ವಹಿಂದೂ ಪರಿಷದ್, ಬಜರಂಗದಳ ತಾಲ್ಲೂಕು ಘಟಕ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಬಾಂಗ್ಲಾ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಾಂಗ್ಲಾ ದೇಶದಲ್ಲಿ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಹಿಂಸಾಚಾರ, ದೌರ್ಜನ್ಯ ಅತ್ಯಂತ ಹೇಯ ಕೃತ್ಯವಾಗಿದೆ. ಬಾಂಗ್ಲಾ ದೇಶದ ಹಿಂದೂ ಯುವಕ ಚಂದ್ರದಾಸ್ ಅವರ ಕ್ರೂರ್ ಹತ್ಯ ಅತ್ಯಂತ ಅಪಾಯಕಾರಿ ಘಟನೆ ಆಗಿದೆ. ಈ ಘಟನೆಯನ್ನು ಹಿಂದೂಗಳು ಯಾವತ್ತಿಗೂ ಸಹಿಸಿಕೊಳ್ಳುವುದಿಲ್ಲ ಎಂದರು.
ಜಾತ್ಯತೀತ ಎಂದು ಕರೆಯಿಸಿಕೊಳ್ಳುವ ವ್ಯಕ್ತಿಗಳು, ಅಂತರರಾಷ್ಟ್ರೀಯ, ಪ್ರಪಂಚದಾದ್ಯಂತ ಇರುವ ಮಾನವ ಹಕ್ಕುಗಳ ವೇದಿಕೆಗಳು ಈ ಕ್ರೂರ ಹತ್ಯೆ ಬಗ್ಗೆ ಧ್ವನಿ ಎತ್ತದೆ ಇರುವುದು ಕಳವಳಕಾರಿ ಆಗಿದೆ. ಪೊಲೀಸರ ರಕ್ಷಣೆಯಲ್ಲಿದ್ದರೂ ಚಂದ್ರದಾಸ್ ಹತ್ಯೆ ಆಗಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮೌನವಹಿಸದೆ ಬಾಂಗ್ಲಾ ದೇಶದ ಹಿಂದುಗಳು ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಬಳಿಕ ಪ್ರತಿಭಟನಾ ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ, ಮುರಗೋಡ ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದರು.
ವಿಶ್ವಹಿಂದೂ ಪರಿಷದ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ವಿಶ್ವಹಿಂದೂ ಪರಿಷದ್ ತಾಲ್ಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ, ಮಾಜಿ ಸೈನಿಕ ಗಂಗಪ್ಪ ಗುಗ್ಗರಿ, ರಾಷ್ಟ್ರೀಯ ಸ್ವಯಂ ಸೇವಕ ಮುಖಂಡ ಚಿದಂಬರ ಮೇಟಿ, ಬಜರಂಗದಳ ತಾಲ್ಲೂಕು ಘಟಕ ಸಂಯೋಜಕ ಗಿರೀಶ ಹರಕುಣಿ ಮಾತನಾಡಿದರು.
ಬಿಜೆಪಿ ಮುಖಂಡ ಮಡಿವಾಳಪ್ಪ ಹೋಟಿ, ವಿರುಪಾಕ್ಷ ಕೋರಿಮಠ, ಮಹಾಂತೇಶ ಗುಂಡ್ಲೂರ, ವಕೀಲ ಆನಂದ ವಾಲಿ, ಸುಭಾಷ ಬಾಗೇವಾಡಿ, ಗೌತಮ ಇಂಚಲ, ಗಣೇಶ ಕಾಂಬ್ಳೆ, ಶಿವಪ್ರಸಾದ ಪಾಟೀಲ, ವಿಶಾಲ ಬೋಗೂರ, ಚನ್ನಪ್ಪ ಹಾದಿಮನಿ, ವಿವೇಕಾನಂದ ಪೂಜಾರ, ಸಾಯಿಕುಮಾರ ಇಳಗೇರ, ಭರತ ಹುಲಮನಿ, ವಿಜಯ ಪತ್ತಾರ, ವಿ.ಕೆ.ಬಡಿಗೇರ, ಸಂಗಮೇಶ ಸವದತ್ತಿಮಠ, ಕೃಷ್ಣಾ ಬಿಸ್ಮೆ, ಉಳವಪ್ಪ ದೇಗಾಂವಿ, ಮಲ್ಲಿಕಾರ್ಜುನ ಅಂಬಗಿ, ಶಂಕರ ಮಲಕನ್ನವರ, ಮುರುಘಯ್ಯ ಮಠಪತಿ, ಆನಂದ ತೋಟಗಿ, ಆನಂದ ಹಿರೇಮಠ, ರವಿ ವನ್ನೂರ, ಚಂದ್ರು ಉಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.