ADVERTISEMENT

ಪಬ್‌ಜಿ ಪಂದ್ಯಾವಳಿ ಪ್ರಚಾರ ಪತ್ರ ವೈರಲ್‌: ಸುಳ್ಳು ಸುದ್ದಿ ಎಂದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 15:19 IST
Last Updated 15 ಸೆಪ್ಟೆಂಬರ್ 2019, 15:19 IST
ಗೋಕಾಕದಲ್ಲಿ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಪಬ್‌ಜಿ ಪಂದ್ಯಾವಳಿ ಪ್ರಚಾರ ಪತ್ರ
ಗೋಕಾಕದಲ್ಲಿ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಪಬ್‌ಜಿ ಪಂದ್ಯಾವಳಿ ಪ್ರಚಾರ ಪತ್ರ   

ಗೋಕಾಕ: ನಗರದಲ್ಲಿ ಜಿಆರ್‌ಬಿಸಿ ಶಾಲೆಯಲ್ಲಿ ಭಾನುವಾರ ಪಬ್‌ಜಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂಬ ಪ್ರಚಾರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಬೆಳಿಗ್ಗೆ ಪ್ರತಿಭಟನೆ ನಡೆಸಿ, ಪೊಲೀಸರಿಗೆ ಮನವಿ ಸಲ್ಲಿಸಿದ್ದರು.

ಆರೋಪಿಗಳಾದ ಸುನೀಲ ಮತ್ತು ಸೀನು ಎಂಬ ಯುವಕರನ್ನುನಗರ ಠಾಣೆಯ ಪೊಲೀಸರು ಕರೆಸಿ ವಿಚಾರಣೆ ನಡೆಸಿದಾಗ, ‘ಇದರಲ್ಲಿ ನಮ್ಮ ತಪ್ಪು ಇಲ್ಲ. ಯಾರೋ ಕಿಡಿಗೇಡಿಗಳುಪ್ರಚಾರ ಪತ್ರದಲ್ಲಿ ನಮ್ಮ ಹೆಸರು ಹಾಗೂ ಮೊಬೈಲ್‌ ಸಂಖ್ಯೆ ನಮೂದಿಸಿ ಈ ರೀತಿ ಮಾಡಿದ್ದಾರೆ’ ಎಂದು ದೂರು ನೀಡಿದ್ದಾರೆ.

ಯುವಕರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು, ಎಚ್ಚರಿಕೆ ನೀಡುವ ಮೂಲಕ ಪೊಲೀಸರು ಈ ವಿಷಯಕ್ಕೆ ಬ್ರೇಕ್‌ ಹಾಕಿದ್ದಾರೆ.

ADVERTISEMENT

ಪ್ರಚಾರ ಪತ್ರ ವೈರಲ್‌:ಪ್ರಚಾರ ಪತ್ರವನ್ನು ಗಮನಿಸಿದ್ದ ನಗರದ ಜನರು ಇದರ ಬಗ್ಗೆ ಆಶ್ಚರ್ಯಗೊಂಡಿದ್ದರು. ಇಂಗ್ಲಿಷ್‌ನಲ್ಲಿ ಮಾಹಿತಿ ಇದ್ದ ಪತ್ರದಲ್ಲಿ ಪಬ್‌ಜಿ ಪಂದ್ಯಾವಳಿ,ಪ್ರಥಮ ಬಹುಮಾನ ₹ 4,000, ದ್ವಿತೀಯ ಬಹುಮಾನ 2,000, ಪ್ರವೇಶ ದರ ₹ 400 ಇತ್ಯಾದಿ ಮಾಹಿತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.