ಅಥಣಿ: ‘ಶಿಕ್ಷಣ ಸಂಸ್ಥೆಯ ಹೆಚ್ಚಾದಂತೆ ಸಮಾಜಕ್ಕೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅದು ಎಲ್ಲಾ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯಾಗಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಂಗಮನಾಥ ಎಜುಕೇಶನ್ ಮತ್ತು ಸೋಶಿಯಲ್ ವೆಲ್ ಫೇರ್ ಫೌಂಡೇಷನ್‌ನ ಯುರೊಕಿಡ್ಸ್ ಶಾಲಾ ಉದ್ಘಾಟಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಶಿಕ್ಷಣ ನಿಡಿ ಮಕ್ಕಳನ್ನ ವಿದ್ಯಾವಂತರಾಗಿ ಮಾಡಿದರೆ, ಜಗತ್ತಿನಲ್ಲಿ ಭಾರತ ಶ್ರೇಷ್ಠವಾಗುತ್ತದೆ ಎಂದು ಹೇಳಿದರು.
ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ‘ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುವುದೂ ಅತಿ ಮುಖ್ಯವಾಗಿದೆ. ನಿತ್ಯ ಜೀವನದಲ್ಲಿ ಬದಕುವ ದಾರಿಯನ್ನು ಪಾಲಕರು ಕಲಿಸಬೇಕು. ಮಾನವೀಯ ಮೌಲ್ಯಗಳು ಈಗಿನ ಮಕ್ಕಳಲ್ಲಿ ಕಾಣೆಯಾಗಿವೆ. ಮಾನವೀಯ ಮೌಲ್ಯಗಳನ್ನ ಮಕ್ಕಳಲ್ಲಿ ತುಂಬುವ ಕೆಲಸ ಶಿಕ್ಷಣ ಸಂಸ್ಥೆ ಮಾಡಬೇಕಿದೆ’ ಎಂದು ಹೇಳಿದರು.
ಕೌಲಗುಡ್ಡದ ಅಮರೇಶ್ವರ ಮಹಾರಾಜರು, ಶೆಟ್ಟರಮಠದ ಮರಳುಸಿದ್ದ ಮಾಹಾಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಫೌಂಡೇಷನ್ ಅಧ್ಯಕ್ಷ ಪರಪ್ಪಾ ಸವದಿ ಸ್ವಾಗತಿಸಿದರು. ಲಡಗಿ ನಿರೂಪಿಸಿ, ವಂದಿಸಿದರು.
ವಿನೋದ ರೆಡ್ಡಿ ಯುರೊಕಿಡ್ಸ್ ಶಾಲೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಮಲ್ಲೇಶ ಸವದಿ, ಖಜಾಂಚಿ ಶಿವಾನಂದ ಸವದಿ ಮುಖಂಡ ಚಿದಾನಂದ ಸವದಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.