ADVERTISEMENT

ರಸಪ್ರಶ್ನೆ ಸ್ಪರ್ಧೆ: ಹಾರೂಗೇರಿ ವಿದ್ಯಾರ್ಥಿಗಳ ಮೇಲುಗೈ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 7:42 IST
Last Updated 14 ಜನವರಿ 2022, 7:42 IST
ಮುಗಳಖೋಡದಲ್ಲಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು
ಮುಗಳಖೋಡದಲ್ಲಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು   

ಮುಗಳಖೋಡ: ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಇಲ್ಲಿನ ಆದರ್ಶ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹಾರೂಗೇರಿ ಮಕ್ಕಳು ಮೇಲುಗೈ ಸಾಧಿಸಿದರು.

ಪ್ರಥಮ ಬಹುಮಾನ ₹ 5ಸಾವಿರ ಹಾಗೂ ಟ್ರೋಫಿಯನ್ನು ಹಾರೂಗೇರಿಯ ವಿಶ್ವ ಸ್ಪರ್ಧಾತ್ಮಕ ನವೋದಯ ಸಂಸ್ಥೆಯ ವಿದ್ಯಾರ್ಥಿಗಳಾದ ಸಹನಾ ಮುರಾರಿ, ಸರ್ವೇಶ ಹಿರೇಮಠ, ಸುಪ್ರಿತಾ ಮುರಾರಿ, ಸಾವಿತ್ರಿ ಹಾರೂಗೇರಿ ಪಡೆದರು.

2ನೇ ಬಹುಮಾನ ₹ 3ಸಾವಿರ ಹಾಗೂ ಟ್ರೋಫಿಯನ್ನು ಹಾರೂಗೇರಿಯ ವಿಶ್ವಭಾರತಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರೀರಕ್ಷಾ ನಾಯಿಕ, ಶ್ವೇತಾ ಮೇಲಾಪೂರ, ಸಾಗರ ಕರಿಗಾರ, ವರ್ಷಾ ಬೆಕ್ಕೇರಿ ತಮ್ಮದಾಗಿಸಿಕೊಂಡರು.

ADVERTISEMENT

ತೃತೀಯ ಬಹುಮಾನವನ್ನು ಇಲ್ಲಿನ ಮಲ್ಲಿಕಾರ್ಜುನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಚಿಮ್ಮಡ, ಐಶ್ವರ್ಯಾ ಗೌಲತ್ತಿನ್ನವರ, ಸಿತಾರಾ ಐಹೊಳೆ ಹಾಗೂ ಯಶೋದಾ ಮಾಂಗ ಗೆದ್ದರು.

4ನೇ ಬಹುಮಾನವನ್ನು ಇಲ್ಲಿನ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಲಕ್ಷ್ಮಿ ಬೋರಗಾಂವಿ, ಐಶ್ವರ್ಯಾ ಬಂಬಲವಾಡ, ಸ್ವಾತಿ ಬಡಿಗೇರ, ಸಿರಿಯಾ ಯಡವನ್ನವರ ಪಡೆದರು.

ಮುಗಳಖೋಡ, ಹಾರೂಗೇರಿ, ತೇರದಾಳ ಹಾಗೂ ಹಿಡಕಲ್‌ನ 9 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ವಿಜೇತರಿಗೆ ಪ್ರಶಸ್ತಿ, ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಶ್ರೀಕಾಂತ ಖೇತಗೌಡರ ಅಧ್ಯಕ್ಷತೆ ವಹಿಸಿದ್ದರು. ಹಣಮಸಾಬ ನಾಯಿಕ ಮುಖ್ಯಅತಿಥಿಯಾಗಿದ್ದರು. ಮುಖ್ಯ ಶಿಕ್ಷಕ ಅಜೇಯ ತೇರದಾಳ ಉಪಸ್ಥಿತರಿದ್ದರು.

ಎಂ.ಎಸ್. ಕಡಟ್ಟಿ ನಿರೂಪಿಸಿದರು. ಎಲ್.ಜಿ. ಕರೀಭೀಮಗೋಳ ಸ್ವಾಗತಿಸಿದರು. ನಬಿಸಾಬ ತಹಶೀಲ್ದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.