ADVERTISEMENT

ಪೌರಕಾರ್ಮಿಕರ ಪಾದಗಳಿಗೆ ಪೂಜಿಸಿ ರಾಹುಲ್‌ ಗಾಂಧಿ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 12:56 IST
Last Updated 19 ಜೂನ್ 2021, 12:56 IST
ಅಥಣಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು ಪುರಸಭೆ ಪೌರಕಾರ್ಮಿಕರ ಪಾದ ಪೂಜಿಸಿ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಜನ್ಮ ದಿನ ಆಚರಿಸಿದರು
ಅಥಣಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು ಪುರಸಭೆ ಪೌರಕಾರ್ಮಿಕರ ಪಾದ ಪೂಜಿಸಿ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಜನ್ಮ ದಿನ ಆಚರಿಸಿದರು   

ಅಥಣಿ (ಬೆಳಗಾವಿ ಜಿಲ್ಲೆ): ಇಲ್ಲಿನ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು ಪುರಸಭೆ ಆವರಣದಲ್ಲಿ 50 ಪೌರಕಾರ್ಮಿಕರ ಪಾದ ಪೂಜಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜನ್ಮದಿನವನ್ನು ವಿನೂತನವಾಗಿ ಶನಿವಾರ ಆಚರಿಸಿದರು.

‘ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತಿನಂತೆ ನಿಜ ಶ್ರಮಜೀವಿಗಳಾದ ಪೌರಕಾರ್ಮಿಕರ ಪಾದ ಪೂಜೆ ಮಾಡುವುದು ನಿಜವಾದ ಪರಮಾತ್ಮನನ್ನು ಪೂಜಿಸಿದಂತೆಯೇ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಹೇಳಿದರು.

ಪೌರಕಾರ್ಮಿಕರಿಗೆ ಅಭಿನಂದನಾ ಪತ್ರವನ್ನೂ ನೀಡಲಾಯಿತು.

ADVERTISEMENT

ಮುಖಂಡ ಗಜಾನನ ಮಂಗಸೂಳಿ, ‘ಕೋವಿಡ್ ಭೀತಿ ನಡುವೆಯೂ ಪೌರಕಾರ್ಮಿಕರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಅವರ ಕಾರ್ಯ ಶ್ಲಾಘನೀಯ’ ಎಂದರು.

ಮುಖಂಡ ಸುನಿಲ ಸಂಕ, ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿದರು.

ಮುಖಂಡರಾದ ಅನಿಲ ಸುಣದೋಳಿ, ಧರೆಪ್ಪ ಠಕ್ಕಣ್ಣವರ, ಬಸವರಾಜ ಬುಟಾಳಿ, ರಾಬಸಾಬ ಐಹೊಳೆ, ಅಸ್ಲಂ ನಾಲಬಂದ, ರಾಜು ಜಮಖಂಡಿಕರ, ನಿಶಾಂತ ದಳವಾಯಿ, ಶ್ರೀಕಾಂತ ಪೂಜಾರಿ, ಗೌತಮ ಪರಾಂಜಪೆ, ವಿಲೀನರಾಜ ಯಳಮಲ್ಲೆ, ಕಪಿಲ ಘಟಕಾಂಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.